ಭಾರತದ ಉದ್ಯಮ ದಿಗ್ಗಜ ಮುಕೇಶ್ ಅಂಬಾನಿ, 2024ರ ಹೊತ್ತಿಗೆ ಸುಮಾರು 120 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಭಾರತದ ಶ್ರೀಮಂತ ವ್ಯಕ್ತಿಯಾದ ಅಂಬಾನಿಯವರ ವ್ಯಾಪಾರ ಸಾಮ್ರಾಜ್ಯವು ದಾನ ಕಾರ್ಯಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಹರಡಿದೆ.
ಮುಕೇಶ್ ಅಂಬಾನಿ ಸರಳ ಜೀವನವನ್ನು ನಡೆಸುತ್ತಾರೆ. ಇದರಲ್ಲಿ ಅವರು ಸರಳ ದಾಲ್, ರೋಟಿ, ಅನ್ನದ ಸಸ್ಯಹಾರಿ ಊಟವನ್ನು ಆನಂದಿಸುತ್ತಾರೆ, ಥಾಯ್ ನಂತಹ ಕೆಲವು ಪಾಕಪದ್ಧತಿಗಳಿಗೆ ಒಲವು ತೋರುತ್ತಾರೆ. ಅವರು ತಮ್ಮ ಬಿಡುವಿಲ್ಲದ ಜೀವನದಲ್ಲಿ ಫಿಟ್‌ನೆಸ್ ಮತ್ತು ಸ್ವಾಸ್ಥ್ಯ ಅಂಶವನ್ನು ಪೂರೈಸಲು ಮೀಸಲಾದ ದಿನಚರಿಯನ್ನು ಹೊಂದಿದ್ದಾರೆ. ಆದ್ದರಿಂದ ಅವರ ಬಾಣಸಿಗ ಪ್ರಮುಖ ಪಾತ್ರ ವಹಿಸುತ್ತಾರೆ. ಮಿಂಟ್ ವರದಿಯ ಪ್ರಕಾರ, ಅವರ ಬಾಣಸಿಗರಿಗೆ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿಗಳನ್ನು ಪಾವತಿಸಲಾಗುತ್ತದೆ.
ಈ ಹಿಂದೆ 2017ರಲ್ಲಿ ಹೊರಬಂದ ಹಳೆಯ ವಿಡಿಯೋದಲ್ಲಿ ಅವರ ವೈಯಕ್ತಿಕ ಚಾಲಕನೂ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿ ಗಳಿಸುತ್ತಾನೆ ಎಂದು ಹೇಳಲಾಗಿತ್ತು. ವರದಿಗಳ ಪ್ರಕಾರ, ಅವರ ವೈಯಕ್ತಿಕ ಸೇವೆಯಲ್ಲಿರುವ ಪ್ರತಿಯೊಬ್ಬ ಉದ್ಯೋಗಿಗೂ ಇತರ ಸೌಲಭ್ಯಗಳು ಮತ್ತು ಭತ್ಯೆಗಳೊಂದಿಗೆ ಸಮಾನವಾಗಿ ಪಾವತಿಸಲಾಗುತ್ತದೆ.
2023ರಲ್ಲಿ, ಮುಕೇಶ್ ಅಂಬಾನಿ ತಮ್ಮ ಆಪ್ತ ಸಹಾಯಕರಾದ ಮನೋಜ್ ಮೋದಿಯವರಿಗೆ 22 ಅಂತಸ್ತಿನ ಅಪಾರ್ಟ್ಮೆಂಟ್ ನೀಡಿದ್ದರು. ಇದರ ಮೌಲ್ಯ ಬರೋಬ್ಬರಿ 1500 ಕೋಟಿ ರೂಪಾಯಿ ಎನ್ನಲಾಗಿದೆ. ಮನೋಜ್, ಮೋದಿ ಅವರು ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಬಹು-ಮಿಲಿಯನ್ ಡಾಲರ್ ವ್ಯವಹಾರಗಳನ್ನು ಮತ್ತು ಹಲವಾರು ಅಗತ್ಯ ಯೋಜನೆಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಂಟಿಲಿಯಾದ ವೈಭವವನ್ನು ಉದ್ಯೋಗಿಗಳಿಗೂ ವಿಸ್ತರಿಸಲಾಗಿದೆ. ಅವರಿಗೆ ಆಹಾರ, ಪ್ರಯಾಣ, ಮಕ್ಕಳ ಶಿಕ್ಷಣ ಮುಂತಾದ ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಂಬಾನಿಗಳ 27 ಅಂತಸ್ತಿನ ಐಷಾರಾಮಿ ಜೀವನವನ್ನು ನಿರ್ವಹಿಸಲು ಎಲ್ಲಾ ಉದ್ಯೋಗಿಗಳು ತಮ್ಮ ಡೊಮೇನ್‌ನಲ್ಲಿ ನುರಿತ ಮತ್ತು ನಿಪುಣರಾಗಿದ್ದಾರೆ.