ಮುಂಬೈ: ಭಾರತದ ಅತಿ ಶ್ರೀಮಂತರಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಏಷ್ಯಾದ ಅತಿ ಶ್ರೀಮಂತರ ಪಟ್ಟಿ ಮತ್ತು ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲೂ ಮುಂಚೂಣಿಯಲ್ಲಿದ್ದಾರೆ.
ಫೋರ್ಬ್ಸ್‌ನ ವಿಶ್ವದ “ರಿಯಲ್ ಟೈಮ್ ಬಿಲಿಯನೇರ್” ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಆರನೇ ಸ್ಥಾನದಲ್ಲಿ ಮತ್ತು ಗೌತಮ್ ಅದಾನಿ ಏಳನೇ ಸ್ಥಾನದಲ್ಲಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಮುಕೇಶ್ ಅಂಬಾನಿ ಎಂಟನೇ ಸ್ಥಾನ ಮತ್ತು ಗೌತಮ್ ಅದಾನಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಮಂಗಳವಾರದ ಮಾಹಿತಿ ಪ್ರಕಾರ, ಎರಡೂ ಪಟ್ಟಿಗಳಲ್ಲಿ ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ.
BREAKING: ರೆಪೋ ದರ ಬದಲು; ಬಡ್ಡಿದರ ಹೆಚ್ಚಳದಿಂದ ಇಎಂಐಗಳಲ್ಲಿ ವ್ಯತ್ಯಾಸ
ಮುಕೇಶ್ ಅಂಬಾನಿ ನಿವ್ವಳ ಮೌಲ್ಯ – ಫೋರ್ಬ್ಸ್‌ನ ವಿಶ್ವದ “ರಿಯಲ್- ಟೈಮ್ ಬಿಲಿಯನೇರ್‌ಗಳ ಪಟ್ಟಿ”ಯ ಮಂಗಳವಾರದ ಮಾಹಿತಿ ಪ್ರಕಾರ, ಮುಕೇಶ್ ಅಂಬಾನಿ ಅವರ ನಿವ್ವಳ ಸಂಪತ್ತಿನ ಮೌಲ್ಯ 103.1 ಶತಕೋಟಿ ಡಾಲರ್. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಅಂಬಾನಿ ಸಂಪತ್ತಿನ ಮೌಲ್ಯ 101 ಶತಕೋಟಿ ಡಾಲರ್.
ಗೌತಮ್ ಅದಾನಿ ಸಂಪತ್ತೆಷ್ಟು? – ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಮಂಗಳವಾರದ ಮಾಹಿತಿ ಪ್ರಕಾರ, ಗೌತಮ್ ಅದಾನಿಯ ನಿವ್ವಳ ಸಂಪತ್ತು 96.9 ಶತಕೋಟಿ ಡಾಲರ್. ಫೋರ್ಬ್ಸ್‌ನ ವಿಶ್ವದ “ರಿಯಲ್- ಟೈಮ್ ಬಿಲಿಯನೇರ್‌ಗಳ ಪಟ್ಟಿ” ಪ್ರಕಾರ ಅದಾನಿ ಸಂಪತ್ತು 100.9 ಶತಕೋಟಿ ಡಾಲರ್.