ರಿಲಾಯನ್ಸ್ ಉದ್ಯಮಗಳ ಸಮೂಹದ ಶೇರುಗಳ ಬೆಲೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿ ಶತಕೋಟಿ ಡಾಲರ್ ಒಡೆಯರಾದ ಜಗತ್ತಿನ 11ನೇ ವ್ಯಕ್ತಿಯಾಗಿದ್ದಾರೆ.
ಟೆಸ್ಲಾದ ಎಲಾನ್ ಮಸ್ಕ್, ಅಮೆಜ಼ಾನ್‌ನ ಜೆಫ್ ಬೆಜ಼ೋಸ್ ಸೇರಿದಂತೆ ಹತ್ತು ಮಂದಿ ಈ ಕಿರೀಟ ಧರಿಸಿದ್ದಾರೆ.
ರಾಷ್ಟ್ರೀಯ ಶೇರು ಸೂಚ್ಯಂಕದ ಶುಕ್ರವಾರದ ವಹಿವಾಟಿನ ದಿನದಂದು ರಿಲಾಯನ್ಸ್‌ನ ರೀಟೇಲ್‌ನಿಂದ ಟೆಲಿಕಾಂವರೆಗಿನ ಸಮೂಹದ ಶೇರು ಮೌಲ್ಯವು 2,684 ರೂ.ಗಳಿಗೆ ಏರಿಕೆ ಕಂಡಿದೆ. ಇದೇ ವೇಳೆ ಮುಖೇಶ್ ಅಂಬಾನಿಯವರ ಸಂಸ್ಥೆಯ ಮಾರುಕಟ್ಟೆ ಮೌಲ್ಯವು 17.46 ಲಕ್ಷ ಕೋಟಿ ರೂ. ಮಟ್ಟ ತಲುಪಿದೆ.
ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಭರ್ಜರಿ ʼಬಂಪರ್ʼ ಕೊಡುಗೆ
ಬ್ಲೂಂಬರ್ಗ್‌ನ ಶತಕೋಟ್ಯಾಧೀಶರ ಸೂಚ್ಯಂಕದ ಪ್ರಕಾರ ಅಂಬಾನಿ ಒಟ್ಟಾರೆ ಆಸ್ತಿ ಮೌಲ್ಯವು $100.6 ಶತಕೋಟಿ ತಲುಪಿದ್ದು, 2021ರಲ್ಲೇ ಅವರ ಆಸ್ತಿಯಲ್ಲಿ $23.6 ಶತಕೋಟಿಯಷ್ಟು ಏರಿಕೆ ಕಂಡಿದೆ. ಜಗತ್ತಿನ 500 ಅತ್ಯಂತ ಸಿರಿವಂತ ರ‍್ಯಾಂಕಿಂಗ್ ಅನ್ನು ಪ್ರತಿನಿತ್ಯ ಬ್ಲೂಂಬರ್ಗ್ ಸೂಚ್ಯಂಕ ಅಪ್ಡೇಟ್ ಮಾಡುತ್ತದೆ.
ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಆಸಕ್ತಿ ತೋರಿರುವ ಅಂಬಾನಿ, ಮುಂದಿನ ಕೆಲ ವರ್ಷಗಳಲ್ಲಿ ಈ ಸಂಬಂಧ 75,000 ಕೋಟಿ ರೂ.ಗಳ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ.