ಮುಂಬೈ: ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಈ ದೀಪಾವಳಿಗೆ 120 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಖರೀದಿಸಿದ್ದಾರೆ.
ದೀಪಾವಳಿ ಧನ್ ತೇರಾಸ್ ಸಂದರ್ಭದಲ್ಲಿ ಚಿನ್ನ ಖರೀದಿಸಿದರೆ ಸಂಪತ್ತು ವೃದ್ಧಿಸುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚಿನವರು ಚಿನ್ನಾಭರಣ ಖರೀದಿಸುತ್ತಾರೆ. ಮುಖೇಶ್ ಅಂಬಾನಿ ಕೂಡ 120 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಖರೀದಿಸಿದ್ದಾರೆ. ಅಂದರೆ ಅವರು ಚಿನ್ನ, ಬೆಳ್ಳಿ ಮೇಲೆ 120 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿಯ ಸಮಯದಲ್ಲಿ ಚಿನ್ನ ಖರೀದಿಯನ್ನು ಭಕ್ತಿ ಮತ್ತು ಸಂಪ್ರದಾಯಗಳಿಗೆ ಗೌರವದ ಸೂಚಕವಾಗಿದೆ. ಭವಿಷ್ಯದಲ್ಲಿ ಮುಂದುವರೆಯುವ ಸಂಪತ್ತಿನ ಆಶಯವಾಗಿದೆ. ಈ ದೀಪಾವಳಿಯಲ್ಲಿ ಮುಕೇಶ್ ಅಂಬಾನಿ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆ ಆಯ್ಕೆಯು ಸಂಪತ್ತು ವೃದ್ಧಿ ಭಾಗವೇ ಆಗಿದೆ. ಆರ್ಥಿಕ ಏರಿಳಿತಗಳ ಹೊರತಾಗಿಯೂ ಚಿನ್ನ ಮತ್ತು ಬೆಳ್ಳಿ ಶತಮಾನಗಳಿಂದ ತಮ್ಮ ಮೌಲ್ಯವನ್ನು ಉಳಿಸಿಕೊಂಡಿವೆ. ಹಣದುಬ್ಬರ ಅಥವಾ ಷೇರು ಮಾರುಕಟ್ಟೆ ಕುಸಿತದ ಸಮಯದಲ್ಲಿಯೂ ಸಹ ಚಿನ್ನ ಮತ್ತು ಬೆಳ್ಳಿ ಸ್ಥಿರ ಹೂಡಿಕೆ ಸ್ಥಿರತೆ ಹೊಂದಿರುತ್ತದೆ. ಅಂಬಾನಿಯಂತಹವರಿಗೆ ಚಿನ್ನ ಮತ್ತು ಬೆಳ್ಳಿಯಲ್ಲಿ ಅವರ ಸಂಪತ್ತಿನ ಒಂದು ಭಾಗವು ಅವರ ಹೂಡಿಕೆ ಬಂಡವಾಳಕ್ಕೆ ಸ್ಥಿರತೆ ಮತ್ತು ವೈವಿಧ್ಯತೆಯನ್ನು ಸೇರಿಸುತ್ತದೆ.