
ಮಡಿಕೇರಿ: ಜೀವನದಿ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ. ಅಕ್ಟೋಬರ್ 17ರಂದು ಬೆಳಗ್ಗೆ 7:40ಕ್ಕೆ ಕಾವೇರಿ ತೀರ್ಥೋದ್ಭವವಾಗಲಿದೆ.
ತುಲಾ ಲಗ್ನದಲ್ಲಿ ಜೀವನದಿ ಕಾವೇರಿ ಆವಿರ್ಭವಿಸಲಿದ್ದಾಳೆ. ಭಾಗಮಂಡಲದಲ್ಲಿ ಶಾಸ್ತ್ರ ನೋಡುವ ಕಾರ್ಯದಲ್ಲಿ ಮುಹೂರ್ತ ನಿಗದಿ ಮಾಡಲಾಗಿದೆ. ಅ. 17 ರಂದು ತಲಕಾವೇರಿಯಲ್ಲಿ ತೀರ್ಥಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ ನೀಡಲಿದ್ದಾಳೆ.