ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದ್ದು, 2024 ಜನವರಿ 22 ರಂದು ಲೋಕಾರ್ಪಣೆಗೊಳ್ಳಲಿದೆ.
ಕೋಟ್ಯಂತರ ಹಿಂದೂ ಭಕ್ತರ ಕನಸಾಗಿದ್ದು, ಅಯೋಧ್ಯ ರಾಮ ಮಂದಿರ ನಿರ್ಮಾಣ ಉದ್ಘಾಟನೆಗೆ ಸಜ್ಜಾಗುತ್ತಿದೆ. ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಭಕ್ತರಿಗೆ 2024ರ ಜನವರಿ 25 ರಿಂದ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಅಯೋಧ್ಯೆ ರಾಮಮಂದಿರಕ್ಕೆ ರಾಹುಲ್ ಗಾಂಧಿ ಕೂಡ ತೆರಳುವ ಸಾಧ್ಯತೆಯಿದೆ.
ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಕಾರ್ಯವು ವೇಗವಾಗಿ ನಡೆಯುತ್ತಿದೆ. 2024 ರಲ್ಲಿ ಪ್ರಧಾನಿ ಮೋದಿ ದೇವಾಲಯವನ್ನು ಉದ್ಘಾಟಿಸಲಿದ್ದು, ನಂತರ ಭಕ್ತರಿಗೆ ತೆರೆಯಲಾಗುವುದು. ದೇವಾಲಯದ ನಿರ್ಮಾಣ ಕಾರ್ಯದ ಬಗ್ಗೆ ಹೊಸ ಚಿತ್ರಗಳು ನಿರಂತರವಾಗಿ ಹೊರಬರುತ್ತಿವೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಗಡುವಿನ ಪ್ರಕಾರ, ದೇವಾಲಯದ ನಿರ್ಮಾಣವು ಡಿಸೆಂಬರ್ 15, 2023 ರೊಳಗೆ ಪೂರ್ಣಗೊಳ್ಳಬೇಕು. ರಾಮ ಮಂದಿರ ಟ್ರಸ್ಟ್ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಹೊಸ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದೆ. ಮೂರು ಅಂತಸ್ತಿನ ರಾಮ ಮಂದಿರದ ಮೊದಲ ಮಹಡಿಯ ಕೆಲಸವನ್ನು ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಕಂಬಗಳ ಮೇಲೆ ದೇವರು ಮತ್ತು ದೇವತೆಗಳ ಪ್ರತಿಮೆಗಳನ್ನು ಕೆತ್ತಲಾಗುತ್ತಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರವನ್ನು 2024 ರ ಜನವರಿಯಲ್ಲಿ ಉದ್ಘಾಟಿಸಲಾಗುವುದು ಎಂದು ಮೂಲಗಳು ತಿಳಿಸಿದೆ.