ರಾಯಚೂರು: ಮೊಹರಂ ಮೆರವಣಿಗೆಯ ವೇಳೆ ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ದೇವರನ್ನು ಹೊತ್ತುಕೊಂಡಿದ್ದ ಛತ್ರಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ.
ದೇವರನ್ನು ಹೊತ್ತುಕೊಂಡಿದ್ದ 50 ವರ್ಷದ ಹುಸೇನ್ ಸಾಬ್ ಮತ್ತು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಸಂತೆಕೆಲ್ಲೂರಿನಲ್ಲಿ ಮೊಹರಂ ಮೆರವಣಿಗೆಯ ವೇಳೆ ಈ ಘಟನೆ ನಡೆದಿದೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಮತೆಕೆಲ್ಲೂರಿನಲ್ಲಿ ನಡೆದ ಮೊಹರಂ ಮೆರವಳಿಗೆ ಸಂದರ್ಭದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಮಸ್ಕಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.