ಪಾಕಿಸ್ತಾನದ ವಿವಾದಾತ್ಮಕ ಧರ್ಮಗುರು ಮುಫ್ತಿ ಅಬ್ದುಲ್ ಖವಿ, ಬಾಲಿವುಡ್‌ನ ʼಡ್ರಾಮಾ ಕ್ವೀನ್ʼ ರಾಖಿ ಸಾವಂತ್ ತಮ್ಮ ಮದುವೆ ಪ್ರಸ್ತಾಪವನ್ನು ಸ್ವೀಕರಿಸಿದರೆ ಅವರನ್ನು ಜಪಾನ್‌ಗೆ ಹನಿಮೂನ್‌ಗೆ ಕರೆದೊಯ್ಯಲು ಯೋಜಿಸಿರುವುದಾಗಿ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮದುವೆ ಪ್ರಸ್ತಾಪ ಮಾಡಿದ ನಂತರ, ಆಕೆ ಒಪ್ಪಿಕೊಂಡರೆ ವಿವಾಹದ ಬಳಿಕ ಹನಿಮೂನ್ ಗೆ ಜಪಾನ್ ಗೆ ಹೋಗುವುದಾಗಿ ತಿಳಿಸಿದ್ದಾರೆ.
ರಾಖಿಗೆ ತಮ್ಮ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಲು ಮೂರು ದಿನಗಳ ಕಾಲಾವಕಾಶ ನೀಡಿದ್ದು, ಆದರೆ ರಾಖಿ, ಮುಫ್ತಿ ಖವಿ ಅವರ ಪ್ರಸ್ತಾಪಕ್ಕೆ ಅಧಿಕೃತವಾಗಿ ಇನ್ನೂ ಪ್ರತಿಕ್ರಿಯಿಸಿಲ್ಲ.