ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತರ ಅಮಾನತು ಬೆನ್ನಲ್ಲೇ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅಮಾನತು ಬಳಿಕ ಇದೀಗ ಮುಡಾ ವಿಶೇಷ ಭೂಸ್ವಾಧೀನಾಧಿಕಾರಿ ಆರ್.ಮಂಜುನಾಥ್ ಅವರನ್ನು ವರ್ಗಾವಣೆ ಮಾದಲಾಗಿದೆ.
ಆರ್.ಮಂಜುನಾಥ್ ಸೇರಿದಂತೆ ಒಟ್ಟು 8 ಜನ ಕೆಎ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಗೀತಾ ಕೌಜಲಗಿ, ಮಹೇಶ್ ಜೆ, ಮಂಜುನಾಥ್ ಆರ್, ಜಗನ್ನಾಥ ರೆಡ್ಡಿ, ಅರುಣ್ ಕುಮಾರ್ ಕುಲ್ಕರ್ಣಿ, ಅನುರಾಧ ವಸ್ತ್ರ, ಮೊಹಮ್ಮದ್ ಶಕೀಲ್ ಸೇರಿದಂತೆ 8 ಕೆ.ಎ.ಎಸ್ ಅಧಿಕರಿಗಳನ್ನು ವರ್ಗಾವಣೆ ಮಾಡಲಾಗಿದೆ.