ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದ ಮತ್ತೊಂದು ಹಗರಣ ಬಲಯಾಗಿದೆ. ಮುಡಾದಿಂದ 36 ಜನರಿಗೆ 211 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಒಬ್ಬೊಬ್ಬರಿಗೆ 26 ಸೈಟ್, 21 ಸೈಟ್ ಹೀಗೆ ಮನ ಬಂದಂತೆ ನಿವೇಶನಗಳನ್ನು ಹಂಚಿರುವುದು ಬಹಿರಂಗವಾಗಿದೆ.
ಮುಡಾ 50:50 ನಿವೇಶನದ ಫಲಾನುಭವಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಮುಡಾದಿಂದ ಪರಿಹಾರ ರೂಪದಲ್ಲಿ ಒಬ್ಬೊಬ್ಬ ವ್ಯಕ್ತಿಗಳಿಗೆ 20ಕ್ಕಿಂತ ಹೆಚ್ಚು ನಿವೇಶನ ಹಂಚಿರುವುದು ಬೆಳಕಿಗೆ ಬಂದಿದೆ.
ಅಬ್ದುಲ್ ವಾಜಿದ್ ಎಂಬ ಓರ್ವ ವ್ಯಕ್ತಿಗೆ 26 ಸೈಟ್ ಗಳನ್ನು ನೀಡಲಾಗಿದೆ. ಸೈಯದ್ ಯೂಸುಫ್ ಎಂಬಾತನಿಗೆ 21 ಸೈಟ್ ಹಂಚಲಾಗಿದೆ. ಮಲ್ಲಪ್ಪ ಎಂಬುವವರಿಗೆ 19 ಸೈಟ್, ದೇವಮ್ಮ ಎಂಬುವವರಿಗೆ 16 ಸೈಟ್, ಮಹದೇವು ಹಾಗೂ ಗೀತಾ ಎಂಬುವವರಿಗೆ 12 ಸೈಟ್, ಸುರೇಶಮ್ಮ ಎಂಬುವವರಿಗೆ 11 ಸೈಟ್ ಹಂಚಲಾಗಿದೆ.
ಆಲನಹಳ್ಳಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಿಗೆ ಒಟ್ಟು 13 ಸೈಟ್ ಹಂಚಲಾಗಿದೆ. ಮೊದಲ ಪಟ್ಟಿಯಲ್ಲಿ ಒಟ್ಟು 36 ಜನರಿಗೆ 211 ಸೈಟ್ ಹಂಚಿರುವುದು ಬೆಳಕಿಗೆ ಬಂದಿದೆ.