ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದ ಆರ್ ಟಿ ಐ ಕಾರ್ಯಕರ್ತ ಗಂಗರಾಜು ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ತಿಳಿದುಬಂದಿದೆ.
ತನಗೆ ಬೆದರಿಕೆ ಹಾಕಲಾಗುತ್ತಿದ್ದು, ತನಗೆ ಓರ್ವ ಗನ್ ಮ್ಯಾನ್ ನೀಡುವಂತೆ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಪತ್ರ ಬರೆದು ಗಂಗರಾಜು ಮನವಿ ಮಾಡಿದ್ದಾರೆ.
ಆದರೆ ಗಂಗರಾಜುಗೆ ಗನ್ ಮ್ಯಾನ್ ನೀಡಲು ಸರ್ಕಾರ ನಿರಾಕರಿಸಿದ್ದು, ಗಂಗರಾಜು ನಿವಾಸದ ಬಳಿ ನಿರಂತರವಾಗಿ ಪೊಲೀಸ್ ಬೀಟ್ ನಡೆಸಲು ಪೊಲೀಸರನ್ನು ನಿಯೋಜಿಸಲಾಗಿದೆ.
ಯಾವುದೇ ಬೆದರಿಕೆ ಕರೆ ಬಂದರೆ ದೂರು ನೀಡಿ. ನಿಮ್ಮ ಹಾಗೂ ನಿಮ್ಮ ಕುಟುಂಬಕ್ಕೆ ಭದ್ರತೆ ಬೇಕಿದ್ದರೆ ನಿಯಮಾನುಸಾರ ಹಣ ಪಾವತಿಸಿ ಗನ್ ಮ್ಯಾನ್ ಪಡೆಯಬಹುದು ಎಂದು ಪೊಲೀಸರು ಗಂಗರಾಜು ಅವರುಗೆ ಹಿಂಬರಹ ನೀಡಿದ್ದಾರೆ.