ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ಆರಂಭಿಸಿದ್ದು, ಇಡಿ ವಿಚಾರಣೆಗೆ ಹಾಜರಾಗಿದ್ದ ಮೈಸೂರು ಪಾಲಿಕೆ ಗುತ್ತಿಗೆ ನೌಕರನನ್ನು ವಜಾಗೊಳಿಸಲಾಗಿದೆ.
ಮೈಸೂರು ಪಾಲಿಕೆ ಗುತ್ತಿಗೆ ನೌಕರ ಬಿ.ಕೆ.ಕುಮಾರ್ ವಜಾಗೊಂಡ ನೌಕರ. ಕುಮಾರ್ ಅವರನ್ನು ವಜಾಗೊಳಿಸಿ ಮೈಸೂರು ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಆದೇಶ ಹೊರಡಿಸಿದ್ದಾರೆ.
ಬಿ.ಕೆ.ಕುಮಾರ್ ಹೆಚ್ಚುವರಿ ಕೆಲಸಕ್ಕಾಗಿ ಮುಡಾಗೆ ನೇಮಕವಾಗಿದ್ದರು. ಮುಡಾದಲ್ಲಿ ಕೆಲಸ ಮಾಡುತ್ತಾ ಪಾಲಿಕೆಯಿಮ್ದಲೂ ಸಂಬಳ ಪಡೆಯುತ್ತಿದ್ದರು. ಏಕಕಾಲದಲ್ಲಿ ಎರಡು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದರು. ನಿಯಮ ಉಲ್ಲಂಘನೆ ಮಾಡಿ ಎರಡು ಸರ್ಕಾರಿ ಕಚೇರಿಗಳಲ್ಲಿ ಸಂಬಳ ಪಡೆಯುತ್ತಿದ್ದ ಕಾರಣಕ್ಕೆ ಕುಮಾರ್ ಅವರನ್ನು ವಜಾಗೊಳಿಸಲಾಗಿದೆ.
ಇನ್ನು ಮುಡಾ ಹಗರಣದಲ್ಲಿ ಕುಮಾರ್ ಭಗಿಯಾಗಿದ್ದಾರೆ ಎಂಬ ಆರೋಪವಿದೆ. ಹಿಂದಿನ ಆಯುಕ್ತರಿಗೆ ಖಾಲಿ ನಿವೇಶನಗಳ ಬಗ್ಗೆ ಮಾಹಿತಿ, ಮಂಜೂರಾತಿ ಮಾಡಲು ಅಗತ್ಯ ದಾಖಲೆ ತಂದು ಕೊಡುತ್ತಿದ್ದ ಬಗ್ಗೆ ಆರೋಪವಿದೆ.