ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ 14 ಸೈಟ್ ಗಳನ್ನು ವಾಪಾಸ್ ನೀಡಿದ್ದು, ಇದೀಗ ಎಲ್ಲಾ ನಿವೇಶನಗಳು ಮೂಡಾ ಪಾಲಾಗಿವೆ. 14 ಸೈಟ್ ಗಳ ಕ್ರಮಪತ್ರ ರದ್ದಾಗಿವೆ ಎಂದು ಸ್ವತಃ ಮೂಡಾ ಆಯುಕ್ತರೇ ಹೇಳಿಕೆ ನೀಡಿದ್ದಾರೆ. ಇದೇ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ತನಿಖೆ ಹಂತದಲ್ಲಿರುವಾಗಲೇ ಮುಡಾ ಆಯುಕ್ತರು 14 ಸೈಟ್ ಗಳ ಕ್ರಮಪತ್ರ ರದ್ದು ಮಾಡಿದ್ದಾರೆ. ಈ ಮೂಲಕ ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ. ಮುಡಾ ಆಯುಕ್ತರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸೈಟ್ ವಾಪಾಸ್ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ. ಮುಡಾ ಆಯುಕ್ತರ ಮೇಲೆ ಯಾರು ಪ್ರಭಾವ ಬೀರಿದ್ದಾರೆ ಎಂಬುದೂ ಗೊತ್ತಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.