alex Certify ಸದನದಲ್ಲಿ ಬಿಜೆಪಿ-ಜೆಡಿಎಸ್ ನವರದ್ದು ಅಹೋರಾತ್ರಿ ಧರಣಿ ಅಲ್ಲ; ಹಾಡು ಹಾಡಿ, ಕುಣಿದು ಮಜಾ ಮಾಡ್ತಿದ್ದಾರೆ: ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದನದಲ್ಲಿ ಬಿಜೆಪಿ-ಜೆಡಿಎಸ್ ನವರದ್ದು ಅಹೋರಾತ್ರಿ ಧರಣಿ ಅಲ್ಲ; ಹಾಡು ಹಾಡಿ, ಕುಣಿದು ಮಜಾ ಮಾಡ್ತಿದ್ದಾರೆ: ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ

ಬೆಂಗಳೂರು: ಮುಡಾ ಅಕ್ರಮದ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಬಿಜೆಪಿ-ಜೆಡಿಎಸ್ ಸದಸ್ಯರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿರುವ ವಿಚಾರಕ್ಕೆ ಸಂಬಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾರೆಡ್ಡಿ, ಅವರು ಮಾಡಿದ್ದು ಧರಣಿಯಲ್ಲ, ಹಾಡು ಹಾಡಿ, ಕುಣಿದು ಮಜಾ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ, ಜೆಡಿಎಸ್ ಸದಸ್ಯರು ಅಹೋರಾತ್ರಿ ಧರಣಿ ಹೆಸರಲ್ಲಿ ತಾಳ ಹಾಕಿ, ಕುಣಿದು ಮಜಾ ಮಾಡಿದ್ದಾರೆ. ಭಜನೆ, ಹಾಡು ಹಾಡಿ ಮಸ್ತಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪಾದಯಾತ್ರೆ ಮಾಡುವುದಾಗಿ ಹೇಳುತ್ತಿದ್ದಾರೆ. ಮಾಡಲಿ. ಬಿಜೆಪಿಯವರಿಗೆ 10 ಕಿ.ಮೀ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ. ಹತ್ತು ಕಿ.ಮೀ ಹೋಗುವವರೆಗೆ ಬಿದ್ದು ಬಿಡ್ತಾರೆ ಎಂದು ವ್ಯಂಗ್ಯವಾಡಿದರು.

ಮುಡಾ ಅಕ್ರಮ ಬಿಜೆಪಿ ಅವಧಿಯಲ್ಲಿ ನಡೆದಿದ್ದು, ಬಿಜೆಪಿಯವರು ಭ್ರಷ್ಟರಲ್ಲಿ ಭ್ರಷ್ಟರು. ಆಗ ಯಾಕೆ ತನಿಖೆ ನಡೆಸಿಲ್ಲ? ವಾಲ್ಮೀಕಿ ನಿಗಮದ ಹಗರಣಕ್ಕಿಂತಲೂ ಮುಡಾ ಹಗರಣ ಹಳೆಯದು. ಅವರ ಸರ್ಕಾರದ ಅವಧಿಯಲ್ಲಿಯೇ ತನಿಖೆ ನಡೆಸಬಹುದಿತ್ತು. ಯಾಕೆ ನಡೆಸಿಲ್ಲ. ಈ ಹಿಂದೆ 5 ವರ್ಷ ಬಿಜೆಪಿ ಸರ್ಕಾರ ಇದ್ದಾಗ ಮುಡಾ ನಿವೇಶನ ಹಂಚಿಕೆಯಾಗಿದೆ. ಹೀಗಿರುವಾಗ ಬಿಜೆಪಿ ಅವಧಿಯಲ್ಲಿ ಆಗಿರುವ ಅಕ್ರಮವನ್ನು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...