ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ,ಕೆಲವೊಂದು ಮಾಹಿತಿ ನೀಡಲು ಆರ್ ಟಿ ಐ (RTI) ಕಾರ್ಯಕರ್ತ ಗಂಗರಾಜು ಬೆಂಗಳೂರಿನ ಇಡಿ ಕಚೇರಿಗೆ ಆಗಮಿಸಿದ್ದಾರೆ.
ಬೆಂಗಳೂರಿನ ಕಚೇರಿಗೆ ಬಂದು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಆರ್ ಟಿ ಐ ಕಾರ್ಯಕರ್ತ ಗಂಗರಾಜುಗೆ ದೂರವಾಣಿ ಕರೆ ಮೂಲಕ ಇಡಿ ಅಧಿಕಾರಿಗಳು ಸೂಚನೆ ನೀಡಿದ್ದರು.
ಅಂತೆಯೇ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳ ಸಮೇತ ಗಂಗರಾಜು ಬಂದಿದ್ದಾರೆ. ಈ ಹಿಂದೆ ಬಂದಾಗ ಕೆಲವು ದಾಖಲೆಗಳನ್ನು ನೀಡಿದ್ದೆ, ಅಂದು ಹೇಳಿಕೆ ದಾಖಲಿಸಿರಲಿಲ್ಲ, ಇಂದು ಹೇಳಿಕೆ ದಾಖಲಿಸಬಹುದು ಎಂದು ಹೇಳಿದ್ದಾರೆ. ಹಾಗೂ ನನ್ನ ಬಳಿ ಇರುವ ಎಲ್ಲಾ ದಾಖಲೆಗಳನ್ನು ಇಡಿ ಅಧಿಕಾರಿಗಳಿಗೆ ಸಲ್ಲಿಸುತ್ತೇನೆ ಎಂದು ಗಂಗರಾಜು ಹೇಳಿದ್ದಾರೆ.