ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಸಲಾರ್ ಚಿತ್ರದ ಟ್ರೈಲರ್ ಶುಕ್ರವಾರ ಸಂಜೆ 7:19 ಕ್ಕೆ ಬಿಡುಗಡೆಯಾಯಿತು.
ಪ್ರಭಾಸ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಆಕ್ಷನ್- ಡ್ರಾಮಾ ಸಿನಿಮಾ ಆಗಿದ್ದು, ಇದು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಅವರ ತೆಲುಗು ಚೊಚ್ಚಲ ಚಿತ್ರವಾಗಿದೆ. ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತು ಶ್ರೀಯಾ ರೆಡ್ಡಿ ಸೇರಿದಂತೆ ಹಲವು ನಟರು ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಸಲಾರ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಪ್ರಭಾಸ್ ಮಾಸ್ ಡೈಲಾಗ್ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸಲಾರ್ ಟೀಸರ್ ನೋಡಿದವರಿಗೆ ಉಗ್ರಂ ಚಿತ್ರದ ನೆನಪಾಗಿದೆ. ಕಾರಣ ಎರಡೂ ಚಿತ್ರದ ಕಥೆ ಒಂದೇ ರೀತಿ ಇರುವುದು. ಕಥೆಯಲ್ಲಿ ಸ್ಪಲ್ಪ ಬದಲಾವಣೆ ಮಾಡಲಾಗಿದೆ. ಚಿತ್ರದ ಟ್ರೇಲರ್ ನೋಡಿದವರು ಇದು ಉಗ್ರ ಕಥೆಯೇ ಇರಬಹುದು ಎಂದು ಅಂದುಕೊಂಡಿದ್ದಾರೆ. ಆದರೆ ಉಗ್ರಂ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎನ್ನಲಾಗಿದೆ.
ಈ ಚಿತ್ರದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಈ ಹಿಂದೆ ಸಲಾರ್ ಪಾರ್ಟ್ 1 – ಕದನ ವಿರಾಮದ ಟೀಸರ್ ಅನ್ನು ಬಿಡುಗಡೆ ಮಾಡಿತ್ತು.ಇತ್ತೀಚೆಗೆ, ತಮ್ಮ ಚಿತ್ರದ ಪ್ರಚಾರದ ಸಮಯದಲ್ಲಿ, ಪ್ರಶಾಂತ್ ನೀಲ್ ಅವರು ಸಲಾರ್ ಕಲ್ಪನೆ ತಮ್ಮ ಮನಸ್ಸಿನಲ್ಲಿ ಹೇಗೆ ಹುಟ್ಟಿಕೊಂಡಿತು ಎಂದು ಚರ್ಚಿಸಿದರು. “ಸಲಾರ್ ಮಾಡುವ ಆಲೋಚನೆ 15 ವರ್ಷಗಳ ಹಿಂದೆಯೇ ನನ್ನ ಮನಸ್ಸಿಗೆ ಬಂದಿತ್ತು, ಆದರೆ ನನ್ನ ಮೊದಲ ಚಿತ್ರ ಉಗ್ರಂ ಮಾಡಿದ ನಂತರ, ನಾನು ಕೆಜಿಎಫ್ ನಲ್ಲಿ ನಿರತನಾದೆ, ಇದಕ್ಕೆ ನನಗೆ ಸುಮಾರು 8 ವರ್ಷಗಳು ಬೇಕಾಯಿತು. ಈ ರೀತಿಯಾಗಿ, ಈ ಚಲನಚಿತ್ರವನ್ನು ಮಾಡುವ ಆಲೋಚನೆ ಈಗಾಗಲೇ ನನ್ನ ಮನಸ್ಸಿನಲ್ಲಿತ್ತು ಮತ್ತು ಕೋವಿಡ್ ಸಮಯದಲ್ಲಿ, ಕೆಜಿಎಫ್ 2 ಬಿಡುಗಡೆಯಾಗದಿದ್ದಾಗ, ನಾವೆಲ್ಲರೂ ಮನೆಯಲ್ಲಿ ಕುಳಿತಿದ್ದರಿಂದ ನಮಗೆಲ್ಲರಿಗೂ ಸಾಕಷ್ಟು ಸಮಯವಿತ್ತು. ಆದ್ದರಿಂದ ನಾನು ಅದರ ಮೇಲೆ ಸ್ವಲ್ಪ ಕೆಲಸ ಮಾಡಿದೆ ಎಂದಿದ್ದಾರೆ.