ಕೋಲಾರ: ಸಿದ್ದರಾಮಯ್ಯನವರು ನನ್ನ ಗುರು, ನಾನು ಅವರ ಶಿಷ್ಯನೇ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಕೋಲಾರ ಜಿಲ್ಲೆ ಮಾಲೂರಿನಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರು ನನ್ನ ಗುರು. ನಾನು ಶಿಷ್ಯ. ಆದರೆ, ಈಗ ಗುರುವನ್ನು ಬಿಟ್ಟು ಬೇರೆ ಪಕ್ಷ ಸೇರಿದ್ದೇನೆ. ಈಗ ಬೇರೆ ಗುರು ಇದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮೋತ್ಸವಕ್ಕೆ ನನ್ನನ್ನು ಕರೆದಿಲ್ಲ. ಅವರ ಇಷ್ಟ ಮಾಡಿಕೊಳ್ಳಲಿ ಎಂದ ಅವರು, ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ