ಬೆಂಗಳೂರು: ರಾಜ್ಯದ ಶ್ರೀಮಂತರ ರಾಜಕಾರಣಿಗಳಲ್ಲಿ ಒಬ್ಬರಾದ ಸಚಿವ ಎಂಟಿಬಿ ನಾಗರಾಜ್ ಬರೋಬ್ಬರಿ 1,510 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅವರು ತಮ್ಮ ಒಟ್ಟು ಆಸ್ತಿಯ ವಿವರ ಘೋಷಣೆ ಮಾಡಿದ್ದಾರೆ. 2019 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಂಟಿಬಿ ನಾಗರಾಜ್ ಸಚಿವ ಸ್ಥಾನ ಪಡೆದ ನಂತರ ಮೂರು ವರ್ಷದಲ್ಲಿ ಅವರ ಆಸ್ತಿ ಶೇಕಡ 23ರಷ್ಟು ಹೆಚ್ಚಳವಾಗಿದೆ.
ಎಂಟಿಬಿ ನಾಗರಾಜ್ ಹೆಸರಲ್ಲಿ 792 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 372 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಎಂಟಿಬಿ ನಾಗರಾಜ್ ಅವರ ಪತ್ನಿ ಶಾಂತಮ್ಮ ನಾಗರಾಜ್ ಅವರ ಬಳಿ 274 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ, 163 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ.
ಎಂಟಿಬಿ ನಾಗರಾಜ್ 71 ಕೋಟಿ ರೂ., ಅವರ ಪತ್ನಿಯ ಹೆಸರಲ್ಲಿ 27 ಕೋಟಿ ಸಾಲ ಇದೆ. ಎಂಟಿಬಿ ಬಳಿ 1.72 ಕೋಟಿ ರೂ ಮೌಲ್ಯದ ಕಾರ್ ಗಳು, ಪತ್ನಿಯ ಬಳಿ 1.33 ಕೋಟಿ ರೂ. ಮೌಲ್ಯದ ಕಾರ್ ಗಳು ಇವೆ. ಎಂಟಿಬಿ ಬಳಿ 64 ಲಕ್ಷ ರೂ., ಅವರ ಪತ್ನಿಯ ಬಳಿ 34 ಲಕ್ಷ ರೂ. ನಗದು ಇದೆ. ಇದರೊಂದಿಗೆ 2.41 ಕೋಟಿ ರೂ ಮೌಲ್ಯದ ಚಿನ್ನಾಭರಣವನ್ನು ಎಂಟಿಬಿ ಹೊಂದಿದ್ದಾರೆ.