alex Certify ಸಣ್ಣ ಕೈಗಾರಿಕೆಗಳಿಗೆ ಗುಡ್ ನ್ಯೂಸ್: ವಿಶೇಷ ಗ್ಯಾರಂಟಿ ಯೋಜನೆಯಡಿ ಯಾವುದೇ ಅಡಮಾನವಿಲ್ಲದೆ 100 ಕೋಟಿ ರೂ.ವರೆಗೆ ಸಾಲ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ಕೈಗಾರಿಕೆಗಳಿಗೆ ಗುಡ್ ನ್ಯೂಸ್: ವಿಶೇಷ ಗ್ಯಾರಂಟಿ ಯೋಜನೆಯಡಿ ಯಾವುದೇ ಅಡಮಾನವಿಲ್ಲದೆ 100 ಕೋಟಿ ರೂ.ವರೆಗೆ ಸಾಲ ಸೌಲಭ್ಯ

ಬೆಂಗಳೂರು: ವಿಶೇಷ ಕ್ರೆಡಿಟ್ ಗ್ಯಾರಂಟಿ ಯೋಜನೆ ಅಡಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಯಾವುದೇ ಅಡಮಾನವಿಲ್ಲದೆ ಕೇಂದ್ರ ಸರ್ಕಾರ 100 ಕೋಟಿ ರೂಪಾಯಿ ಇವರಿಗೆ ಸಾಲ ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಎಂಎಸ್ಎಂಇ ಕ್ಲಸ್ಟರ್ ಔಟ್ ರೀಚ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಕ್ರಮದಿಂದ ದೀರ್ಘಾವಧಿ ಸಾಲ ಬಯಸುವ ಎಂಎಸ್ಎಂಇಗಳಿಗೆ ಬಹಳ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಎರಡು ಮೂರು ವರ್ಷಗಳಲ್ಲಿ ದೇಶಾದ್ಯಂತ ಪ್ರತಿ ಎಂಎಸ್ಎಂಇ ಕ್ಲಸ್ಟರ್ ಗಳಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ ಶಾಖೆಯನ್ನು ತೆರೆಯುವ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ 25 ಶಾಖೆಗಳನ್ನು ಕರೆಯಲಾಗುತ್ತಿದೆ. ಅದರಿಂದ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಮಧ್ಯವರ್ತಿ ಸಾಲವನ್ನು ತೆಗೆದು ಹಾಕಲು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಎಂಎಸ್ಎಂಇಗಳಿಗೆ ಸಾಲ ಪಡೆದುಕೊಳ್ಳಲು ಮೂರನೇ ವ್ಯಕ್ತಿಯ ಗ್ಯಾರಂಟಿ ಅಥವಾ ಯಾವುದೇ ಅಡಮಾನದ ಅವಶ್ಯಕತೆ ಇಲ್ಲದೆ ಕಲ್ಪಿಸಲಾಗುತ್ತಿದೆ. ವಿಶೇಷ ಕ್ರೆಡಿಟ್ ಗ್ಯಾರಂಟಿ ಯೋಜನೆ ಅಡಿಯಲ್ಲಿ ಎಂಎಸ್ಎಂಇಗಳಿಗೆ ಯಾವುದೇ ಅಡಮಾನವಿಲ್ಲದೆ 100 ಕೋಟಿ ರೂಪಾಯಿ ಸಾಲ ನೀಡಲಾಗುವುದು ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...