
ಕ್ರಿಕೆಟ್ ನಲ್ಲಿ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರನ್ನ ಮೆಚ್ಚಿಕೊಳ್ಳದವರೇ ಇಲ್ಲ. ನಿಸ್ಸಂದೇಹವಾಗಿ ಎಂಎಸ್ ಧೋನಿ ಈ ಪೀಳಿಗೆಯ ಅತ್ಯಂತ ಜನಪ್ರಿಯ ಕ್ರಿಕೆಟರ್.
ಅವರು ತಮ್ಮ ವೃತ್ತಿಜೀವನದ ಕೊನೆಯ ಪಯಣದಲ್ಲಿದ್ದಾರೆ ಎಂದು ಹೇಳಬಹುದಾದರೂ ಅಭಿಮಾನಿಗಳು ಅವರನ್ನು ಯಾವಾಗಲೂ ವಿಶೇಷವಾಗಿ ಮತ್ತು ವಿಭಿನ್ನವಾಗಿ ಭಾವಿಸುತ್ತಾರೆ.
IPL 2023 ರಲ್ಲಿ ಧೋನಿ ಮತ್ತು CSK ತಂಡಕ್ಕೆ ಭಾರೀ ಪ್ರಶಂಸೆಯಿದೆ. ಅದರಲ್ಲೂ ಧೋನಿ ಅಭಿಮಾನಿಗಳೊಂದಿಗೆ ವರ್ತಿಸುವ ರೀತಿ ಮನಸೆಳೆಯುತ್ತೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಕೆಕೆಆರ್‌ನೊಂದಿಗೆ ಸಿಎಸ್‌ಕೆ ಐಪಿಎಲ್ ಘರ್ಷಣೆಗೂ ಮುನ್ನ ಅಭ್ಯಾಸದಲ್ಲಿದ್ದ ಧೋನಿಯನ್ನ ನೋಡಲು ಸಾಕಷ್ಟು ಅಭಿಮಾನಿಗಳು ಸೇರಿದ್ದರು.
ಈ ವೇಳೆ ಧೋನಿ ಅಭಿಮಾನಿಯೊಬ್ಬರಿಗೆ ಹೆಚ್ಚು ಗಲಾಟೆ ಮಾಡದಂತೆ ಸೂಚಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಕ್ರೀಡಾಂಗಣದಿಂದ ಅಭಿಮಾನಿಗಳತ್ತ ಬರುವ ಧೋನಿ ಅಭಿಮಾನಿಗಳಿಗೆ ಗಲಾಟೆ ಮಾಡದಂತೆ ಸನ್ನೆ ಮಾಡುತ್ತಾ ಅವರಿಗೆ ಆಟೋಗ್ರಾಫ್ ನೀಡಿದ್ದಾರೆ.