alex Certify ‘ಐಪಿಎಲ್’ ಗೂ ಗುಡ್ ಬೈ ಹೇಳಲಿದ್ದಾರಾ ಧೋನಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಐಪಿಎಲ್’ ಗೂ ಗುಡ್ ಬೈ ಹೇಳಲಿದ್ದಾರಾ ಧೋನಿ…?

14 ಸೀಸನ್‌ಗಳನ್ನು ಪೂರೈಸಿರುವ ಐಪಿಎಲ್‌ ಕ್ರಿಕೆಟ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಸಮರ್ಥವಾಗಿ ಮುನ್ನಡೆಸಿರುವ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಅವರು ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌, ನಾಯಕತ್ವ ಮಾರ್ಗದರ್ಶನ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ.

ಆದರೆ ಏಕದಿನ ಸರಣಿಗೆ ನಿವೃತ್ತಿ ಘೋಷಿಸಿ, ಮುಂದಿನ ತಿಂಗಳ ಟಿ20 ವಿಶ್ವಕಪ್‌ಗೆ ಸಲಹೆಗಾರರಾಗಿ ನೇಮಕಗೊಂಡಿರುವ ಧೋನಿ ಮುಂದಿನ ವರ್ಷ ಕೂಡ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದೊಂದಿಗೆ ಇರಲಿದ್ದಾರೆಯೇ ಎಂಬ ಅನುಮಾನ ದಟ್ಟವಾಗುತ್ತಿದೆ.

BIG NEWS: ಉಪಚುನಾವಣೆ; ಸಿಂದಗಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‌ ಮುಗಿದ ಕೂಡಲೇ ಧೋನಿ ಅವರು ಟಿ20 ನಾಯಕತ್ವಕ್ಕೂ ಗುಡ್‌ಬೈ ಹೇಳಲಿದ್ದಾರೆ ಎಂಬ ಸುಳಿವನ್ನು ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರ್ಯಾಡ್‌ ಹಾಗ್‌ ಕೊಟ್ಟಿದ್ದಾರೆ. 40 ವರ್ಷ ದಾಟಿರುವ ಅವರಲ್ಲಿ ಮೊದಲಿನ ಚುರುಕುತನ ನಿಧಾನವಾಗಿ ಮಾಯವಾಗುತ್ತಿದೆ ಎಂದಿದ್ದಾರೆ.

ಬಹಳ ತಾಳ್ಮೆಯ ಆಟ ಪ್ರದರ್ಶನದಿಂದ ‘ಕ್ಯಾಪ್ಟನ್‌ ಕೂಲ್‌’ ಪಟ್ಟವನ್ನು ತೊಟ್ಟುಕೊಂಡಿರುವ ಧೋನಿ ಅವರು ಜಡೇಜಾರಂತಹ ಆಲ್‌ರೌಂಡರ್‌ ಬೆಳವಣಿಗೆಗೆ ಬೆಂಬಲವಾಗಿ ನಿಂತರು. ಅನೇಕ ಯುವ ಕ್ರಿಕೆಟಿಗರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಿಕೊಟ್ಟರು. ಹಾಗಾಗಿ ಚೆನ್ನೈ ಸೂಪರ್‌ಕಿಂಗ್ಸ್‌ನಲ್ಲಿ ನಾಯಕತ್ವದ ಬದಲು ಅವರನ್ನು ಆಡಳಿತ ಮಂಡಳಿಯ ಉನ್ನತ ಹುದ್ದೆಯಲ್ಲಿ ಮುಂದುವರಿಸುವ ಸಾಧ್ಯತೆಗಳು ಹೆಚ್ಚಿದೆ ಎನಿಸುತ್ತಿದೆ. ಧೋನಿಗೂ ಇದು ಉತ್ತಮ ಅವಕಾಶವೇ ಸರಿ. ಹೆಚ್ಚೆಚ್ಚು ಯುವ ಪ್ರತಿಭೆಗಳನ್ನು ಟಿ20, ಬಳಿಕ ಭಾರತೀಯ ತಂಡಕ್ಕೆ ಸೇರ್ಪಡೆ ಮಾಡಲು ಅವರಿಗೆ ವೇದಿಕೆ ಸಿಗಲಿದೆ ಎನ್ನುತ್ತಿದ್ದಾರೆ ಹಿರಿಯ ಕ್ರಿಕೆಟಿಗರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...