ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಬೈಕ್ ಮೇಲೆ ವಿಶೇಷ ಪ್ರೀತಿಯಿದೆ. ಮಹೇಂದ್ರ ಸಿಂಗ್ ಧೋನಿ ಅನೇಕ ಸೂಪರ್ ಬೈಕ್‌ಗಳು ಮತ್ತು ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ವಿಂಟೇಜ್ ಬೈಕ್ ಗಳ ಮೇಲೆ ಧೋನಿಗೆ ವಿಶೇಷ ಪ್ರೀತಿಯಿದೆ.
ಇತ್ತೀಚೆಗೆ, ಧೋನಿ ಮನೆಯಲ್ಲಿ ಯಮಹಾ ಆರ್‌ಡಿ 350 ಕಾಣಿಸಿಕೊಂಡಿದೆ. ಅದ್ರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ಧೋನಿ ತಮ್ಮ ಫಾರ್ಮ್ ಹೌಸ್ ಹೊರಗೆ ಯಮಹಾ ಆರ್‌ಡಿ 350 ಬೈಕ್ ಓಡಿಸುತ್ತಿರುವುದನ್ನು ಕಾಣಬಹುದು.
1980 ರ ದಶಕದಲ್ಲಿ ಯಮಹಾ ಆರ್‌ಡಿ 350 ಭಾರತದಲ್ಲಿ ಅತ್ಯಂತ ಜನಪ್ರಿಯ ಬೈಕ್ ಆಗಿತ್ತು. ಧೋನಿ ಇಂತಹ ಎರಡು ರಿಸ್ಟೋರ್ ಬೈಕ್‌ಗಳನ್ನು ಆರ್ಡರ್ ಮಾಡಿದ್ದಾರೆ. ಮೊದಲ ಬೈಕ್ ಹಳದಿ ಬಣ್ಣದಲ್ಲಿದ್ದು, ಎರಡನೇ ಬೈಕ್‌ನ ಬಣ್ಣ ಹಸಿರು ಮತ್ತು ಬಿಳಿ ಬಣ್ಣದಲ್ಲಿದೆ. ಎರಡೂ ಬೈಕುಗಳು ಹಳೆ ಮಾದರಿಯಲ್ಲೇ ಇದ್ದು, ಅವುಗಳ ಭಾಗಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ಹೊಸದಾಗಿ ಕಾಣಲು ಬಣ್ಣ ಬಳಿಯಲಾಗಿದೆ.
ಯಮಹಾ ಆರ್‌ಡಿ 350 ಆ ಕಾಲದ ಅತ್ಯಂತ ವೇಗದ ಬೈಕ್ ಆಗಿತ್ತು. ಆರನೇ ಗೇರ್‌ನಲ್ಲಿ ಇದರ ಗರಿಷ್ಠ ವೇಗ ಗಂಟೆಗೆ 160 ಕಿ.ಮೀ. ಆರ್ ಡಿ 350 ಕೇವಲ 7 ರಿಂದ 8 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗ ಪಡೆಯುತ್ತದೆ. ಇದೇ ಕಾರಣಕ್ಕೆ ಇದನ್ನು ರೇಸಿಂಗ್ ಡೆತ್ ಎಂದು ಕರೆಯಲಾಗಿತ್ತು. ಯಮಹಾ, ಆರ್ ಡಿ 350ಗೆ ಡಿಸ್ಕ್ ಬ್ರೇಕ್ ನೀಡಿರಲಿಲ್ಲ, ಅನೇಕ ಭಾರತೀಯ ಗ್ರಾಹಕರು ಖರೀದಿ ನಂತ್ರ ಡಿಸ್ಕ್ ಬ್ರೇಕ್ ಹಾಕಿಸಿಕೊಂಡಿದ್ದರು.