
ಬೆಂಗಳೂರು: ಬ್ಲಾಕ್ ಫಂಗಸ್ ಟೆಸ್ಟ್ ಗೆ ಸರ್ಕಾರದಿಂದ ದರ ನಿಗದಿಪಡಿಸಲಾಗಿದೆ. ಪರೀಕ್ಷೆಗೆ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಟಿ ಸ್ಕ್ಯಾನ್ ಮತ್ತು ಎಂ.ಆರ್.ಐ.ಸ್ಕ್ಯಾನಿಂಗ್ ದರವನ್ನು ನಿಗದಿಪಡಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ದರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ಪ್ರತ್ಯೇಕ ದರವನ್ನು ನಿಗದಿಪಡಿಸಲಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಟೆಸ್ಟಿಂಗ್ ದರದ ವಿವರ
ಮೆದುಳಿನ ಎಂ.ಆರ್.ಐ. ಸ್ಕ್ಯಾನ್ ಗೆ 3000 ರೂ.
ಪ್ಯಾರಾ ನೇಸಲ್ ಸೈನಸ್ ಎಂ.ಆರ್.ಐ. ಟೆಸ್ಟ್ 3000 ರೂ.
ಕಣ್ಣಿನ ಎಂ.ಆರ್.ಐ. ಸ್ಕ್ಯಾನ್ ಗೆ 3000 ರೂ ನಿಗದಿ ಮಾಡಿದ್ದು, ಮೂರು ಟೆಸ್ಟ್ ಒಟ್ಟಿಗೆ ಮಾಡಿಸಿದರೆ 7500 ರೂ. ದರ ನಿಗದಿ ಮಾಡಲಾಗಿದೆ.
ಎಪಿಎಲ್ ಕಾರ್ಡುದಾರರಿಗೆ ಟೆಸ್ಟಿಂಗ್ ದರದ ವಿವರ
ಮೆದುಳಿನ ಎಂ.ಆರ್.ಐ. ಸ್ಕ್ಯಾನ್ ಗೆ 4000 ರೂ.
ಪ್ಯಾರಾ ನೇಸಲ್ ಸೈನಸ್ ಎಂ.ಆರ್.ಐ. ಟೆಸ್ಟ್ 4000 ರೂ.
ಕಣ್ಣಿನ ಎಂ.ಆರ್.ಐ. ಸ್ಕ್ಯಾನ್ ಗೆ 4000 ರೂ. ನಿಗದಿ ಮಾಡಿದ್ದು, ಮೂರು ಟೆಸ್ಟ್ ಒಟ್ಟಿಗೆ ಮಾಡಿಸಿದರೆ 10,000 ರೂ. ದರ ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.