alex Certify ಸಂಸದರ ನಿಧಿ ಪುನಾರಂಭಿಸಿದ ಕೇಂದ್ರ ಸರ್ಕಾರ: ಪ್ರತಿ ಸಂಸದರ ಕ್ಷೇತ್ರಾಭಿವೃದ್ಧಿಗೆ ಸಿಗಲಿದೆ ಇಷ್ಟು ಮೊತ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸದರ ನಿಧಿ ಪುನಾರಂಭಿಸಿದ ಕೇಂದ್ರ ಸರ್ಕಾರ: ಪ್ರತಿ ಸಂಸದರ ಕ್ಷೇತ್ರಾಭಿವೃದ್ಧಿಗೆ ಸಿಗಲಿದೆ ಇಷ್ಟು ಮೊತ್ತ

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸಂಸತ್​ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಮರುಸ್ಥಾಪನೆ ಹಾಗೂ ಮುಂದುವರಿಕೆಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಮಾಹಿತಿ ನೀಡಿದ್ದಾರೆ.

2021-22ನೇ ಸಾಲಿನ ಉಳಿದ ತಿಂಗಳಿಗೆ ಈ ಯೋಜನೆ ಮರಸ್ಥಾಪನೆಯಾಗಲಿದ್ದು ಇದು 2025-26 ನೇ ಸಾಲಿನವರೆಗೂ ಮುಂದುವರಿಯಲಿದೆ ಎಂದು ಠಾಕೂರ್​ ಹೇಳಿದ್ರು. ಕೋವಿಡ್​ 19ನಿಂದಾಗಿ ಈ ಸಂಸದರ ನಿಧಿಯನ್ನು ತಡೆಹಿಡಿಯಲಾಗಿತ್ತು.

ಇಲ್ಲಿ ನಡೆಯುತ್ತೆ ವಿಚಿತ್ರ ಆಚರಣೆ: ಸಗಣಿ ಉಂಡೆಯಲ್ಲಿ ಹೊಡೆದಾಡಿಕೊಳ್ತಾರೆ ಜನ….!

2021-22ನೇ ಸಾಲಿನ ಉಳಿದ ಅವಧಿಗೆ ಪ್ರತಿ ಸಂಸದರಿಗೆ 2 ಕೋಟಿ ರೂಪಾಯಿಯಂತೆ ಒಂದು ಕಂತಿನ ಹಣ ಬಿಡುಗಡೆಯಾಗಲಿದೆ. ಇದಾದ ಬಳಿಕ 2022-23ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಪ್ರತಿ ಸಂಸದರಿಗೆ ವಾರ್ಷಿಕ 5 ಕೋಟಿ ರೂಪಾಯಿ ಮೊತ್ತವು ಎರಡು ಕಂತುಗಳಲ್ಲಿ ಅಂದರೆ ಪ್ರತಿ ಕಂತಿನಲ್ಲಿ 2.5 ಕೋಟಿ ರೂಪಾಯಿ ಮಂಜೂರಾಗಲಿದೆ ಎಂದು ಠಾಕೂರ್​ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಏಪ್ರಿಲ್​ ತಿಂಗಳಲ್ಲಿ ಸಂಸದರ ನಿಧಿಯನ್ನು 2020-21 ಹಾಗೂ 2021-22ನೇ ಸಾಲಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಈ ಹಣವು ಆರೋಗ್ಯ ಇಲಾಖೆಗೆ ವಿನಿಯೋಗವಾಗಲಿದೆ ಎಂದು ಹೇಳಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...