
ಜಾಲತಾಣದಲ್ಲಿ ವೈರಲ್ ಆದ ಈ ವೀಡಿಯೊದಲ್ಲಿ ನೋಡಿದಂತೆ, ಯುವತಿ ತನ್ನ ಸ್ನೇಹಿತನೊಂದಿಗೆ ಕುಳಿತಿದ್ದಾಗ ಸಾಧು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದಂತೆ ಕಾಣುತ್ತಿದೆ. ನರ್ಮದಾ ನದಿಯ ಪಕ್ಕದಲ್ಲಿರುವ ಕೋರಿ ಘಾಟ್ ಮೇಲೆ ಈ ಜೋಡಿ ಕುಳಿತಿತ್ತು.
ದೂರದಿಂದ ಚಿತ್ರೀಕರಿಸಲಾದ ವೀಡಿಯೊದಲ್ಲಿ ಕಂಡುಬರುವಂತೆ, ಸಾಧುವಿಗೆ ಚಪ್ಪಲಿ ತೋರಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಯುವತಿ ಗೆಳೆಯ ಅವಳನ್ನು ತಡೆಯಲು ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಕಾಣಿಸುತ್ತದೆ. ಸಮೀಪದಲ್ಲಿ ಅಡ್ಡಾಡುತ್ತಿದ್ದ ಜನರು ಮಧ್ಯಪ್ರವೇಶಿಸಲು ಹೋಗಿ ನಂತರ ಆಕೆಯ ಮನವೊಲಿಸಿದ್ದಾರೆ.
ಕೊನೆಗೆ ಸಾಧು, ದಂಪತಿಗೆ ಏನೋ ಹೇಳುತ್ತಿರುವುದು ಕಂಡುಬಂತು. ಇಬ್ಬರ ನಡುವೆ ಏನು ಮಾತುಕತೆಯಾಗಿದೆಯೋ ತಿಳಿದಿಲ್ಲ. ಆದರೆ ಸಾಧುವಿನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದನ್ನು ಹಲವರು ಖಂಡಿಸಿದ್ದಾರೆ.