alex Certify ಕಳಪೆ ರಸ್ತೆಯಿಂದಾಗಿ ದಾರಿ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳಪೆ ರಸ್ತೆಯಿಂದಾಗಿ ದಾರಿ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ….!

ಕಳಪೆ ರಸ್ತೆಯ ಕಾರಣದಿಂದಾಗಿ ಆಂಬುಲೆನ್ಸ್​ ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ ಗರ್ಭಿಣಿ ಕೆಸರಿನ ಹಾದಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆಯು ಮಧ್ಯ ಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ನಡೆದಿದೆ.

25 ವರ್ಷದ ನೀಲಂ ಆದಿವಾಸಿ ಹಾಗೂ ಆಕೆಯ ನವಜಾತ ಶಿಶುವನ್ನು ಬಳಿಕ ಕೊಟೋರ್​ ತಹಸೀಲ್​ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪತಿ ಮಾಹಿತಿ ನೀಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.

ನನ್ನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಾನು ಕೂಡಲೇ ಜನನಿ ಎಕ್ಸ್​ಪ್ರೆಸ್​ಗೆ ಕರೆ ಮಾಡಿದೆ. ಆಂಬುಲೆನ್ಸ್​ ಗ್ರಾಮಕ್ಕೇನೋ ಎಂಟ್ರಿ ಕೊಟ್ಟಿತ್ತು. ಅದರೆ ಕಳಪೆ ರಸ್ತೆಯಿಂದಾಗಿ ನಮ್ಮ ಮನೆಯವರೆಗೆ ತಲುಪಲು ಸಾಧ್ಯವಾಗಲಿಲ್ಲ. 2 ಕಿಲೋಮೀಟರ್​ವರೆಗೂ ಕೆಸರು ರಸ್ತೆಯೇ ಇರೋದ್ರಿಂದ ನಮಗೂ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿತ್ತು ಎಂದು ನೀಲಂ ಪತಿ ಪಂಕಜ್​​​ ಆದಿವಾಸಿ ಹೇಳಿದ್ರು.

ಕೆಸರಿನ ಹಾದಿಯಲ್ಲಿ ನಡೆದುಕೊಂಡು ಬರುತ್ತಿರುವಾಗಲೇ ಹೆರಿಗೆ ನೋವು ಹೆಚ್ಚಾಗಿದ್ದರಿಂದ ನೀಲಂ ಕೆಸರು ಹಾದಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಳು ಎನ್ನಲಾಗಿದೆ. ಅದೃಷ್ಟವಶಾತ್​ ತಾಯಿ ಹಾಗೂ ಮಗುವಿನ ಆರೋಗ್ಯ ಸ್ಥಿರವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...