
ಸಿಂಗ್ರೋಲಿಯಲ್ಲಿ ಈ ಘಟನೆ ನಡೆದಿದ್ದು, ಶಾ ಎಂಬವರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಕುಟುಂಬ ಅಂಬುಲೆನ್ಸ್ ಗಾಗಿ ಕರೆ ಮಾಡಿದ್ದರು. ಆದರೆ ಎಷ್ಟು ಹೊತ್ತಾದರೂ ಆಂಬುಲೆನ್ಸ್ ಬರಲಿಲ್ಲ.
ಇದರ ಮಧ್ಯೆ ಶಾ ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸತೊಡಗಿದ ಹಿನ್ನೆಲೆಯಲ್ಲಿ ವಿಧಿ ಇಲ್ಲದೆ ಕುಟುಂಬ ಸದಸ್ಯರು ತಳ್ಳುಗಾಡಿಯ ಮೇಲೆ ಅವರನ್ನು ಮೂರು ಕಿಲೋಮೀಟರ್ ದೂರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ತಳ್ಳುಗಾಡಿಯನ್ನು ಮುಂಬದಿಯಿಂದ ಶಾ ಅವರ ಪತ್ನಿ ಎಳೆಯುತ್ತಿದ್ದರೆ, ಅವರ ಆರು ವರ್ಷದ ಮಗ ಹಿಂದಿನಿಂದ ಗಾಡಿ ತಳ್ಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.