ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನ ಕೋಲಾರ್ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಪ್ರಾಪ್ತೆ ಮೇಲೆ ಆಕೆಯ ಅಜ್ಜ ಹಾಗೂ ಮತ್ತೊಬ್ಬ ವ್ಯಕ್ತಿ ಅತ್ಯಾಚಾರ ಎಸಗಿದ್ದಾರೆ.
ಸಂತ್ರಸ್ತೆಯ ಮೂರು ವರ್ಷದ ಸಹೋದರನ ಮುಂದೆಯೇ ಘಟನೆ ನಡೆದಿದ್ದು, ಬಾಲಕಿಯ ನಡವಳಿಕೆಯಲ್ಲಿ ಆದ ಬದಲಾವಣೆಯನ್ನು ಗಮನಿಸಿ ಆಕೆಯ ತಾಯಿ ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಎಂಟು ದಿನಗಳ ಹಿಂದೆ ಬಾಲಕಿ ಮತ್ತು ಆಕೆಯ ತಮ್ಮನನ್ನು ಚಿಕ್ಕಪ್ಪ ಸಮೋಸ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಅವರ ಅಜ್ಜ ಕೋಣೆಯೊಳಗೆ ಇದ್ದ. ಇಬ್ಬರು ಸೇರಿ ಅತ್ಯಾಚಾರ ಎಸಗಿದ್ದಾರೆ. ಬಾಲಕಿಗೆ ರಕ್ತಸ್ರಾವವಾಗಿರುವುದನ್ನು ಗಮನಿಸಿದ ಆರೋಪಿಗಳು ಆಕೆಗೆ ಸಮೋಸ ಮತ್ತು 20 ರೂಪಾಯಿ ಕೊಟ್ಟು ಕಳುಹಿಸಿದ್ದಾರೆ. ಯಾರಿಗೂ ವಿಷಯ ಹೇಳಿದಂತೆ ತಿಳಿಸಿದ್ದಾರೆ.
ಸಂತ್ರಸ್ತೆ ತನ್ನ ಹೆತ್ತವರಿಗೆ ವಿಷಯ ತಿಳಿಸಲು ಹೆದರುತ್ತಿದ್ದಳು. ಅಲ್ಲದೇ ಆಕೆ ಮೌನವಾಗಿದ್ದಳು. ಬಾಲಕಿಯ ನಡವಳಿಕೆಯಲ್ಲಿ ಆದ ಬದಲಾವಣೆಯನ್ನು ಗಮನಿಸಿದ ತಾಯಿ ಗುರುವಾರ ಸಂಜೆ ವಿಚಾರಿಸಿದಾಗ ಹಲವು ದಿನಗಳಿಂದ ತಾನು ಅನುಭವಿಸುತ್ತಿರುವ ನೋವಿನ ಬಗ್ಗೆ ಬಾಲಕಿ ಹೇಳಿದ್ದಾಳೆ.
ಕೊಲಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತೆಯ ತಾಯಿಯ ಅಜ್ಜ ಮತ್ತು ಮತ್ತೊಬ್ಬ ಆರೋಪಿ ಸಂಜಯ್ ನನ್ನು ಬಂಧಿಸಿದ್ದಾರೆ.