ನಿಶ್ಚಿತಾರ್ಥವಾಗಿದ್ದ ಹುಡುಗಿಯ ಮನೆಗೆ ನುಗ್ಗಿ ಯುವಕರ ಗುಂಪೊಂದು ಆಕೆಯ ಅಪಹರಣಕ್ಕೆ ಯತ್ನಿಸಿ, ಯುವತಿಯ ಮನೆಯವರಿಗೆ ಪ್ರಾಣಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯಲ್ಲಿ ನಡೆದಿದೆ.
22 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಆಕೆ ಬೇರೊಬ್ಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರ ತಿಳಿದ ಬಳಿಕ ಆಕೆಯ ಮನೆಗೆ ನುಗ್ಗಿ ಅಪಹರಿಸಲು ಯತ್ನಿಸಿದ. ಆರೋಪಿ ತನ್ನ ಸಹಾಯಕರೊಂದಿಗೆ ಸೇರಿ ಯುವತಿ ಮನೆಯವರ ಮೇಲೆ ಕತ್ತಿ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾನೆ. ಆರೋಪಿ ತನ್ನ ಸಹಾಯಕರೊಂದಿಗೆ ಸೇರಿ ಯುವತಿಯನ್ನು ಬಲವಂತವಾಗಿ ಎಳೆದೊಯ್ಯುತ್ತಿರುವ ದೃಶ್ಯ ವೈರಲ್ ಆಗಿದೆ.
ಯುವತಿಯ ಸಹೋದರ ಮತ್ತು ಕುಟುಂಬದವರು ಮಧ್ಯಪ್ರವೇಶಿಸಿದಾಗ, ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಗಲಾಟೆಯಿಂದ ಓಡಿಬಂದ ನೆರೆಹೊರೆಯವರು ಜಮಾಯಿಸಿ ದುಷ್ಕರ್ಮಿಗಳ ಅಪಹರಣ ಪ್ರಯತ್ನವನ್ನು ವಿಫಲಗೊಳಿಸಿದರು.
ತನಿಖೆಯ ವೇಳೆ ಪ್ರಮುಖ ಆರೋಪಿ ತನ್ನ ಮೇಲೆ ಈ ಹಿಂದೆ ಅತ್ಯಾಚಾರ ಎಸಗಿದ್ದ ಎಂದು ಸಂತ್ರಸ್ತ ಯುವತಿ ಬಹಿರಂಗಪಡಿಸಿದ್ದಾಳೆ.
ಸಲೀಂ ಖಾನ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ಯುವತಿಯನ್ನು ಬಲವಂತವಾಗಿ ಮನೆಯಿಂದ ಕರೆದುಕೊಂಡು ಹೋಗಲು ಯತ್ನಿಸಿದ್ದಾನೆ. ವರದಿಗಳ ಪ್ರಕಾರ, ಸಲೀಂ ಈ ಹಿಂದೆ ಯುವತಿಯ ತಂದೆ ಮತ್ತು ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು.
ಆಕೆಗೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥವಾಗಿದೆ ಎಂದು ತಿಳಿದ ನಂತರ ಅಪಹರಣ ಕೃತ್ಯಕ್ಕಿಳಿದಿದ್ದ. ಯುವತಿ ಮನೆಯವರು ತಡೆಯಲು ಮುಂದಾದಾಗ ಸಿಟ್ಟಿಗೆದ್ದ ಸಲೀಂ ಕತ್ತಿ, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ನೆರೆಯವರು ಓಡಿಬಂದು ಗಲಾಟೆ ಎದುರಿಸಿದಾಗ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಲೀಂ ಖಾನ್‌ನನ್ನು ಪೊಲೀಸ್ ಅಧಿಕಾರಿಗಳು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಹೆಚ್ಚುವರಿಯಾಗಿ, ಸಂತ್ರಸ್ತೆಯ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಸಲೀಂ ಮತ್ತು ಆತನ ಸಹಚರರ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಸಾರ್ವಜನಿಕರಿಗೆ ಭಯವನ್ನು ಹುಟ್ಟುಹಾಕಲು ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅತ್ಯಾಚಾರ, ಹಲ್ಲೆ, ಬೆದರಿಕೆ ಮತ್ತು ಅಪಹರಣ ಸೇರಿದಂತೆ ಆರೋಪಗಳನ್ನು ಹೊರಿಸಲಾಗಿದೆ. ಸಾರ್ವಜನಿಕರು ಯುವತಿಯ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಮತ್ತು ಎಲ್ಲಾ ನಿವಾಸಿಗಳ ಸುರಕ್ಷತೆ ಮತ್ತು ಭದ್ರತೆ ಕಾಪಾಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.