ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದ ಘಟನೆ ಕೇಳಿದ್ರೆ ಮೈ ಜುಂ ಎನ್ನುತ್ತೆ. ಇಬ್ಬರು ಹೆಣ್ಣುಮಕ್ಕಳು ತಮ್ಮ ತಂದೆಯನ್ನೇ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ. ಈ ದೃಶ್ಯಗಳ ವಿಡಿಯೋ ನೋಡಿದ್ರೆ ಎಂಥವರಿಗೂ ಶಾಕ್ ಆಗುತ್ತೆ.
ನೋಡಿ, ವಿಡಿಯೋದಲ್ಲಿ ಒಬ್ಬಳು ಹೆಣ್ಣುಮಗಳು ತಂದೆಯನ್ನು ಹೊಡೆಯುತ್ತಿದ್ದರೆ, ಇನ್ನೊಬ್ಬಳು ಕೈಕಾಲು ಹಿಡಿದುಕೊಂಡಿದ್ದಾಳೆ. ತಾಯಿ ಕೂಡ ಕಾಲು ಹಿಡಿದು ಎದ್ದೇಳದಂತೆ ನೋಡಿಕೊಳ್ಳುತ್ತಿದ್ದಾರೆ. ತಮ್ಮಂದಿರು ತಡೆಯಲು ಹೋದ್ರೆ ಅವರನ್ನು ಬೈದು ಸೈಡ್‌ಗೆ ಸರಿಸಿದ್ದಾರೆ. ಆಮೇಲೆ ಆ ವ್ಯಕ್ತಿ ಸತ್ತು ಹೋದ್ರು.
ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ. ಆ ವ್ಯಕ್ತಿ ಹೊಡೆತದಿಂದಲೇ ಸತ್ತಿದ್ದಾರಾ ? ಬೇರೆ ಕಾರಣದಿಂದ ಸತ್ತಿದ್ದಾರಾ ? ಅಂತ ಮರಣೋತ್ತರ ಪರೀಕ್ಷೆ ಮಾಡ್ತಿದ್ದಾರೆ. ವಿಡಿಯೋ ನೋಡಿದ್ರೆ ಹೊಡೆತದಿಂದಲೇ ಸತ್ತಿದ್ದಾರೆ ಅಂತ ಅನಿಸುತ್ತೆ. ಆದ್ರೆ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಬಂದಮೇಲೆನೇ ಸತ್ಯ ಗೊತ್ತಾಗುತ್ತೆ ಅಂತಿದ್ದಾರೆ.
ಇನ್ನೊಂದು ವಿಷಯ ಏನಪ್ಪಾ ಅಂದ್ರೆ, ಪೊಲೀಸರು ಜನರಿಗೆ ಹೇಳ್ತಿದ್ದಾರೆ, “ವಿಡಿಯೋ ನೋಡಿ ತೀರ್ಮಾನಕ್ಕೆ ಬರಬೇಡಿ. ನಾವೇ ಎಲ್ಲಾ ತನಿಖೆ ಮಾಡ್ತಿದ್ದೇವೆ. ಏನಾದ್ರೂ ತಪ್ಪು ನಡೆದಿದ್ರೆ ಖಂಡಿತ ಕ್ರಮ ತಗೊಳ್ತೇವೆ” ಅಂತ.
ಈ ಹೆಣ್ಣುಮಕ್ಕಳು ಯಾಕೆ ಹಿಂಗಾಡಿದ್ರು? ಏನಾದ್ರೂ ಜಗಳ ಆಗಿತ್ತಾ? ಅಥವಾ ಬೇರೆ ಏನಾದ್ರೂ ಕಾರಣ ಇತ್ತಾ? ಅನ್ನೋದು ಇನ್ನೂ ಗೊತ್ತಾಗಿಲ್ಲ. ಪೊಲೀಸರು ತನಿಖೆ ಮಾಡ್ತಿದ್ದಾರೆ. ತನಿಖೆ ಮುಗಿದ ಮೇಲೆನೇ ನಿಜವಾದ ವಿಷಯ ಗೊತ್ತಾಗುತ್ತೆ. ಈ ಹೆಣ್ಣುಮಕ್ಕಳ ಮೇಲೆ, ಅಥವಾ ಈ ಕುಟುಂಬದ ಮೇಲೆ ಈ ಮೊದಲು ಏನಾದ್ರೂ ದೂರುಗಳು ದಾಖಲಾಗಿವೆಯಾ ಅನ್ನೋದನ್ನು ಕೂಡಾ ಪೊಲೀಸರು ಪರಿಶೀಲನೆ ಮಾಡ್ತಿದ್ದಾರೆ.
MP से आय़ा रूह कंपा देने वाला वीडियो, बेटियों ने मां के साथ मिलकर पिता को बेरहमी से पीटा ! MP Tak #Crime pic.twitter.com/kciqVmEPo3
— MP Tak (@MPTakOfficial) March 9, 2025