70 ವರ್ಷದ ವೃದ್ಧೆಯ ಮೇಲೆ ಆಕೆಯ ಮಗನ ಅಳಿಯ ಅತ್ಯಾಚಾರವೆಸಗಿರುವ ನಾಗರಿಕರು ತಲೆತಗ್ಗಿಸುವಂತಹ ಶೋಚನೀಯ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ. ಭಾನುವಾರ ರಾತ್ರಿ ನಡೆದಿರುವ ಇಂತಹ ನಾಚಿಕೆಗೇಡು ಪ್ರಕರಣ ಬೆಳಕಿಗೆ ಬಂದಿದೆ.
ಶಿವಪುರಿ ಜಿಲ್ಲೆಯ ಗೋವರ್ಧನ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಸಂತ್ರಸ್ತೆ ತನ್ನ ಮಗನೊಂದಿಗೆ ಗೋವರ್ಧನ್ ಪೊಲೀಸ್ ಠಾಣೆಗೆ ಬಂದು ಘಟನೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಘಟನೆ ನಡೆದಾಗ ಮನೆಯಲ್ಲಿ ಒಬ್ಬಳೇ ಇದ್ದರೆಂದು ಸಂತ್ರಸ್ತೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರೋಪಿ ಆಕೆಯ ಮನೆಗೆ ಬಂದು ಬಲವಂತವಾಗಿ ಕೃತ್ಯ ಎಸಗಿದ್ದಾನೆ. ಮಹಿಳೆಯ ಕಿರುಚಾಟ ಕೇಳಿಸದಂತೆ ಆರೋಪಿ ವೃದ್ಧೆಯ ಬಾಯಿಯನ್ನ ಮುಚ್ಚಿದ್ದನು ಎಂದು ಆರೋಪಿಸಲಾಗಿದ್ದು ಸಂತ್ರಸ್ತೆ ಆತನನ್ನು ಗುರುತಿಸಿದ್ದಾಳೆ.
ವೃದ್ಧೆ ನೀಡಿದ ಹೇಳಿಕೆ ಮೇರೆಗೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಜ್ಯೋತ್ಸ್ನಾ ವರ್ಮಾ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಶಿವಪುರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಗೋವರ್ಧನ ಪೊಲೀಸ್ ಠಾಣೆ ಪ್ರಭಾರಿ ರಘುವೀರ್ ಧಕಡ್ ತಿಳಿಸಿದ್ದಾರೆ.