alex Certify ಕಾಲೇಜು ವಿದ್ಯಾರ್ಥಿಯಿಂದ ಸಿದ್ಧವಾಗಿದೆ ಎಲೆಕ್ಟ್ರಿಕ್ ವಾಹನ….! 30 ರೂ.ಗೆ 185 ಕಿ.ಮೀ. ಓಡಲಿದೆ ಕಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲೇಜು ವಿದ್ಯಾರ್ಥಿಯಿಂದ ಸಿದ್ಧವಾಗಿದೆ ಎಲೆಕ್ಟ್ರಿಕ್ ವಾಹನ….! 30 ರೂ.ಗೆ 185 ಕಿ.ಮೀ. ಓಡಲಿದೆ ಕಾರ್

ಎಲೆಕ್ಟ್ರಿಕ್ ವಾಹನಗಳ ಖರೀದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಫುಲ್ ಚಾರ್ಜ್ ನಲ್ಲಿ ಹೆಚ್ಚು ಕಿಲೋಮೀಟರ್ ಓಡುವ ವಾಹನಗಳನ್ನು ಗ್ರಾಹಕರು ಹುಡುಕ್ತಿದ್ದಾರೆ. ಈ ಮಧ್ಯೆ ಮಧ್ಯಪ್ರದೇಶದ ಸಾಗರ್‌ನ ಕಾಲೇಜು ವಿದ್ಯಾರ್ಥಿ ತನ್ನದೇ ಆದ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಿದ್ದಾರೆ.

ಈ ಕಾರ್, ಒಮ್ಮೆ ಫುಲ್ ಚಾರ್ಜ್‌ ಮಾಡಿದ್ರೆ 185 ಕಿಮೀ ಓಡುತ್ತದೆಯಂತೆ. ಸಾಗರದ ಹಿಮಾಂಶು ಭಾಯ್ ಪಟೇಲ್ 5 ತಿಂಗಳಲ್ಲಿ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಎಲೆಕ್ಟ್ರಿಕ್ ಕಾರಿನಲ್ಲಿ ಚಾಲಕ ಸೇರಿದಂತೆ 5 ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಕಾರು ಸಂಪೂರ್ಣ ಚಾರ್ಜ್ ಮಾಡಿದರೆ 185 ಕಿ.ಮೀ ಓಡತ್ತದೆ. ಕಾರು ಗಂಟೆಗೆ 50 ಕಿಮೀ ವೇಗದಲ್ಲಿ ಚಲಿಸುತ್ತದೆ.

ಇನ್ನೊಂದು ವಿಶೇಷವೆಂದ್ರೆ ಕಾರ್ ಪೂರ್ಣ ಚಾರ್ಜ್‌ಗೆ ಕೇವಲ 30 ರೂಪಾಯಿ ಖರ್ಚು ಬರುತ್ತದೆ. ಕಾರು ಕೇವಲ 4 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ. ರಿಮೋಟ್ ಕಂಟ್ರೋಲರ್ ಆಧಾರಿತ ಸ್ಟಾರ್ಟ್/ಸ್ಟಾಪ್ ಫಂಕ್ಷನ್‌ನೊಂದಿಗೆ ಬರುತ್ತದೆ. ಕಾರು ರಿವರ್ಸ್ ಮೋಡ್ ಒಳಗೊಂಡಿದೆ. ಕಾರಿನ ಇತರ ವೈಶಿಷ್ಟ್ಯಗಳೆಂದರೆ ಎಲೆಕ್ಟ್ರಾನಿಕ್ ಸ್ಪೀಡ್ ಮೀಟರ್, ಬ್ಯಾಟರಿ ಪವರ್ ಮೀಟರ್, ಫಾಸ್ಟ್ ಚಾರ್ಜರ್, ಎಲೆಕ್ಟ್ರಿಕಲ್ ಸುರಕ್ಷತೆಗಾಗಿ ಫ್ಯೂಸ್ ಸಿಸ್ಟಮ್ ಮತ್ತು ಆಂಟಿ-ಥೆಫ್ಟ್ ಅಲಾರ್ಮ್.

ಮಹೀಂದ್ರ ಥಾರ್‌ನಂತೆಯೇ ಈ ಕಾರು ಎಸ್‌ಯುವಿ ರೀತಿ ಕಾಣುತ್ತದೆ. ಈ ಕಾರಿನ ನಿರ್ಮಾಣಕ್ಕೆ ಕೇವಲ 2 ಲಕ್ಷ ರೂಪಾಯಿ ಖರ್ಚು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...