ಕೊರೊನಾ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ಹಬ್ಬಗಳ ಅದ್ಧೂರಿ ಆಚರಣೆಗಳಿಗೆ ಬ್ರೇಕ್ ಬಿದ್ದಿದೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ಗಣೇಶೋತ್ಸವ ಅದ್ಧೂರಿ ಆಚರಣೆಗೆ ಅನುಮತಿ ಸಿಗೋದು ಬಹುತೇಕ ಅನುಮಾನವೇ ಎಂಬಂತಾಗಿದೆ. ಆದರೆ ಸರ್ಕಾರದ ಈ ಯೋಚನೆಗೆ ಸ್ವತಃ ಬಿಜೆಪಿ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ.
ಮೈಸೂರಿನಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಶುಕ್ರವಾರ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಸಲ್ಲಿಸುತ್ತಿದ್ದಾರೋ ಇಲ್ಲವೋ..? ಚರ್ಚ್ಗಳಲ್ಲಿ ಭಾನುವಾರ ಜನ ಸೇರುತ್ತಿದ್ದಾರೋ ಇಲ್ಲವೋ..? ಅಲ್ಲೆಲ್ಲ ಅವಕಾಶ ಕೊಡುತ್ತಿದ್ದೀರಿ ಎಂದಾದ ಮೇಲೆ ಗಣೇಶೋತ್ಸವಕ್ಕೂ ಅವಕಾಶ ನೀಡಿ. ನಮಗೇನೂ ಅದ್ಧೂರಿ ಆಚರಣೆ ಬೇಡ. ಆದರೆ ಉತ್ಸವ ನಡೆಯಲೇಬೇಕು. ಕೋವಿಡ್ ನಿಯಮಾವಳಿಗಳನ್ನು ಅನುಷ್ಠಾನ ಮಾಡಿಯೇ ಅವಕಾಶ ಮಾಡಿಕೊಡಿ. ಸಿಎಂ ಬಸವರಾಜ ಬೊಮ್ಮಾಯಿ ಈ ಎಲ್ಲಾ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆಂಬ ನಂಬಿಕೆ ಇದೆ ಎಂದು ಹೇಳಿದ್ರು.