ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲಾ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬರನ್ನು 300 ಮೀಟರ್ ದೂರಕ್ಕೆ ಎಳೆದೊಯ್ದ ಭದ್ರತಾ ಸಿಬ್ಬಂದಿ ಆಸ್ಪತ್ರೆಯಿಂದ ಹೊರದಬ್ಬಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯ ವೈರಲ್ ಆಗಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಭೋಪಾಲ್ ನಿಂದ 370 ಕಿಲೋಮೀಟರ್ ದೂರದಲ್ಲಿರುವ ಖಾರ್ಗೋನ್ ನಲ್ಲಿ ಘಟನೆ ನಡೆದಿದೆ. ಆಸ್ಪತ್ರೆಗೆ ಬಂದಿದ್ದ ಮಹಿಳೆಯನ್ನು ದರದರನೆ ಎಳೆದೊಯ್ದು ಭದ್ರತಾಸಿಬ್ಬಂದಿ ಹೊರಗೆ ದಬ್ಬಿದ್ದಾನೆ.
ಆಸ್ಪತ್ರೆಯ ಅಧೀಕ್ಷಕ ದಿವೇಶ್ ಶರ್ಮಾ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಸೆಕ್ಯೂರಿಟಿ ಗಾರ್ಡ್ ಬಲವಂತವಾಗಿ ಆಕೆಯನ್ನು ಹೊರ್ಎ ತಳ್ಳಿಲ್ಲ. ಮಹಿಳೆ ಮಾನಸಿಕ ಅಸ್ವಸ್ಥಳಾಗಿದ್ದಾಳೆ. ಆಕೆ ಹೊರಗೆ ಹೋಗಲು ಸಿದ್ಧರಿರಲಿಲ್ಲ. ಆಂಬುಲೆನ್ಸ್ ಬಂದ ಸಂದರ್ಭದಲ್ಲಿ ಮಹಿಳೆ ಅಡ್ಡವಾಗಿದ್ದರಿಂದ ಆಕೆಯನ್ನು ಹೊರಗೆ ಕಳುಹಿಸಲಾಗಿದೆ ಅಷ್ಟೇ. ಆರೋಪಗಳೆಲ್ಲವೂ ಸುಳ್ಳಾಗಿವೆ ಎಂದು ಹೇಳಿದ್ದಾರೆ.
ಮಹಿಳೆಯನ್ನು ಯಾರೋ ಆಸ್ಪತ್ರೆ ಎದುರು ಬಿಟ್ಟುಹೋಗಿದ್ದರು. ಮಹಿಳೆ ಆಸ್ಪತ್ರೆಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ ವೈದ್ಯರನ್ನು ನಿಂದಿಸಿದ್ದಳು. ಆಗ ಆಕೆಯನ್ನು ಹೊರಗೆ ಕಳುಹಿಸಲಾಗಿದೆ. ಆಂಬುಲೆನ್ಸ್ ಬಂದಾಗ ಮಹಿಳೆ ಮುಖ್ಯದ್ವಾರದಲ್ಲಿ ಕುಳಿತುಕೊಂಡಿದ್ದಳು. ಆಗ ಭದ್ರತಾಸಿಬ್ಬಂದಿ ಮನವೊಲಿಸಲು ಪ್ರಯತ್ನಿಸಿ ಕೇಳದಿದ್ದಾಗ ಆಕೆಯನ್ನು ಬಲ ಪ್ರಯೋಗಿಸದೇ ಹೊರಗೆ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.