ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಿವಾಸಿಯಾಗಿರುವ ಮಹಿಳೆಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನೂ ಆಕೆಯ ಗಂಡನೇ ಹರಿಬಿಟ್ಟಿದ್ದಾನೆ.
ಪತ್ನಿಯ ಸಹೋದರನಿಗೆ ಅಶ್ಲೀಲ ಫೋಟೋ ಮತ್ತು ವಿಡಿಯೋ ಕಳುಹಿಸಿ ಅವುಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಗ್ವಾಲಿಯರ್ ಮೂಲದ ಆರೋಪಿಯೊಂದಿಗೆ 4 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆಯಾದ ನಂತರದಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡಲು ಆರಂಭಿಸಿದ್ದ. ಪತಿ ಸರಿಹೋಗಬಹುದು ಎಂದು ಮಹಿಳೆ ಸಹಿಸಿಕೊಂಡಿದ್ದಾಳೆ. ಆದರೆ, ಆತ ಬದಲಾಗದಿದ್ದ ನಂತರದಲ್ಲಿ ವರದಕ್ಷಿಣೆ ದೂರು ದಾಖಲಿಸಿದ್ದಾಳೆ.
ಗಂಡನ ಮನೆ ತೊರೆದ ಮಹಿಳೆ ಪೋಷಕರೊಂದಿಗೆ ಭೋಪಾಲ್ ನಲ್ಲಿ ವಾಸವಾಗಿದ್ದಾಳೆ. ತನ್ನ ವಿರುದ್ಧ ದಾಖಲಿಸಿರುವ ವರದಕ್ಷಿಣೆ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದ ಗಂಡ ಪತ್ನಿ ಒಪ್ಪದಿದ್ದಾಗ ಆಕೆಯ ಆಕ್ಷೇಪಾರ್ಹ ಫೋಟೋ, ವಿಡಿಯೋಗಳನ್ನು ಪತ್ನಿಯ ಸಹೋದರನಿಗೆ ಸೆಂಡ್ ಮಾಡಿದ್ದಾನೆ. ಇವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಗಂಡನ ವಿರುದ್ಧ ದೂರು ನೀಡಿದ್ದಾಳೆ.
ಭೋಪಾಲ್ ನ ಕೋಲಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.