ತಾನೊಬ್ಬ ಕಾರು ಖರೀದಿದಾರ ಎಂದು ಫೋಸ್ ಕೊಟ್ಟ ಖದೀಮನೊಬ್ಬ ಶೋ ರೂಂ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಟೆಸ್ಟ್ ಡ್ರೈವ್ಗೆ ಪಡೆದ ಹೊಸ ಕಾರನ್ನೇ ಎಗರಿಸಿಕೊಂಡು ಹೋದ ಆಘಾತಕಾರಿ ಘಟನೆ ನಡೆದಿದೆ.
ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕಾರ್ ಶೋರೂಮ್ಗೆ ಯುವಕನೊಬ್ಬ ಭೇಟಿಕೊಟ್ಟು ಟೆಸ್ಟ್ ಡ್ರೈವ್ ತೆಗೆದುಕೊಳ್ಳುವ ನೆಪದಲ್ಲಿ ಹೊಸ ಟಾಟಾ ಹ್ಯಾರಿಯರ್ ಪಡೆದ. ನಂತರ ಬೆಪ್ಪಾಗುವ ಸರದಿ ಶೋರೂಂನವರದ್ದಾಗಿತ್ತು. ಟೆಸ್ಟ್ ಡ್ರೈವ್ ಪಡೆದ ಕಾರನ್ನು ವೇಗವಾಗಿ ಓಡಿಸಿ ಕ್ಷಣಾರ್ಧದಲ್ಲಿ ಮಿಂಚಿನಂತೆ ಮಾಯವಾದ. ಶೋ ರೂಂ ಸಿಬ್ಬಂದಿ ಬೆನ್ನಟ್ಟಿದರೂ ಕೈಗೆ ಸಿಗದಾದ.
ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಗ್ರೂಪಿನಿಂದ ಎಕ್ಸಿಟ್ ಆಗುವುದು ಇನ್ನು ಮತ್ತಷ್ಟು ಸುಲಭ
20 ಲಕ್ಷ ರೂ. ಮೌಲ್ಯದ ಕಾರು ಕಣ್ಣಿಗೆ ಕಾಣದಾಗ ಶೋ ರೂಂ ಸಿಬ್ಬಂದಿ ಪೊಲೀಸರ ಮೊರೆ ಹೋದರು. ಈ ವಾಹನ ಕಳ್ಳನ ಹಿಡಿದುಕೊಟ್ಟವರಿಗೆ 10,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಲಾಯಿತು.
ಘಟನೆ ನಡೆದ ನಾಲ್ಕು ಗಂಟೆಗಳ ನಂತರ ಖಜೂರಿ ಕೋಥರ್, ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನವನ್ನು ನಿಲ್ಲಿಸಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ಬಂದಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನವನ್ನು ವಶಕ್ಕೆ ಪಡೆದರು. ಇದರೊಂದಿಗೆ ವಾಹನ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನೂ ಸಹ ಬಂಧಿಸಲಾಗಿದೆ.