ಕೆಲಸದ ನಡುವೆಯೇ ಸಮಯ ಮಾಡಿಕೊಂಡು ಪತ್ನಿಗೆ ತಿಳಿಸದೆಯೇ ಮನೆಗೆ ನುಗ್ಗಿದ ಪತಿಗೆ ಆಘಾತ ಕಾದಿತ್ತು. ಆತ ಕೇವಲ ಗಾಳಿ ಸುದ್ದಿ ಎಂದು ನಂಬಿಕೊಂಡಿದ್ದ ಪರಪುರುಷನ ಜತೆಗೆ ಪತ್ನಿಯ ರಾಸಲೀಲೆಯ ಆರೋಪಗಳು ಕಣ್ಣೆದುರೇ ತೆರೆದುಕೊಂಡಿದ್ದವು. ಯುವಕನೊಬ್ಬನ ಜತೆಗೆ ಪತ್ನಿ ಕೋಣೆಯಲ್ಲಿ ಇರುವುದನ್ನು ಕಂಡ ಪತಿ ಸಿಟ್ಟಿನಿಂದ ಕುದ್ದುಹೋದ.
ಹತ್ತಿರದಲ್ಲೇ ಇದ್ದ ಲಾಠಿ ತೆಗೆದುಕೊಂಡು ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ. ಯುವಕನಿಗೂ ಚೆನ್ನಾಗಿಯೇ ಪೆಟ್ಟು ಬಿತ್ತು. ಮನೆಯಿಂದ ರಸ್ತೆಯ ಮಧ್ಯೆ ಇಬ್ಬರನ್ನು ಎಳೆದೊಯ್ದ ಪತಿಯು ಊರಿನವರ ಎದುರು ಪತ್ನಿಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾನೆ. ಕುಟುಂಬದವರೂ ಆತನಿಗೆ ಬೆಂಬಲವಾಗಿ ನಿಂತಿದ್ದಾರೆ.
ಮಧ್ಯಪ್ರದೇಶದ ಸೊಂಡ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಿ ವೇಗಲ್ಗಾಂವ್ನಲ್ಲಿ ಈ ಘಟನೆ ಜರುಗಿದೆ. ಇದರ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂರನೇ ಮದುವೆ ವೇಳೆ ಮೊದಲ ಹೆಂಡತಿಯಿಂದ ಗೂಸಾ
ಪತ್ನಿಯ ಮೋಸದ ವಿಚಾರ ತಿಳಿದು ಕೂಡಲೇ ಪತಿಯ ಸ್ನೇಹಿತರು ಆತನ ಮನೆಗೆ ಬಂದಿದ್ದಾರೆ. ಅವರು ಕೂಡ ಥಳಿತದಲ್ಲಿ ಭಾಗಿಯಾಗಿದ್ದಾರೆ. ವಿಡಿಯೊ ವೈರಲ್ ಆದ ಹಿನ್ನೆಲೆಯಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಲಿರಾಜ್ಪುರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿಂಗ್, ಮಹಿಳೆಯ ಮೇಲೆ ನಡೆದ ಹಲ್ಲೆ ಸಂಬಂಧ ಸಾಮೂಹಿಕ ಥಳಿತದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತಿ, ಮಾವ, ಸ್ನೇಹಿತರನ್ನು ಬಂಧಿಸಿದ್ದಾರೆ. ಪತ್ನಿಯ ಮೋಸದ ವಿರುದ್ಧ ಕೂಡ ದೂರು ನೀಡುವುದಾಗಿ ಪತಿ ಕುಟುಂಬಸ್ಥರು ವಕೀಲರನ್ನು ಭೇಟಿ ಮಾಡಿ ಸಿದ್ಧತೆ ನಡೆಸಿದ್ದಾರೆ.
ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆಯ ಮತ್ತೊಂದು ಪ್ರಕರಣ ಕೆಲ ದಿನಗಳ ಮುನ್ನ ಇದೇ ಅಲಿರಾಜ್ಪುರ ಜಿಲ್ಲೆಯಲ್ಲಿ ವರದಿಯಾಗಿತ್ತು. ಎರಡನೇ ಬಾರಿಗೆ ಗಂಡನ ಮನೆಯಿಂದ ಓಡಲು ಯತ್ನಿಸಿದ ಪತ್ನಿಯನ್ನು ಮರಕ್ಕೆ ಕಟ್ಟಿಹಾಕಿ ಪತಿಯು ಬರ್ಬರವಾಗಿ ಥಳಿಸಿದ್ದ. ಇದರ ವಿಡಿಯೊ ಕೂಡ ವೈರಲ್ ಆಗಿ ಭಾರಿ ಆಕ್ಷೇಪಕ್ಕೆ ಗುರಿಯಾಗಿತ್ತು.