ಮಧ್ಯಪ್ರದೇಶದ ಇಂದೋರ್ ನಲ್ಲಿ ಕೂಲಿ ಕಾರ್ಮಿಕರ ಪುತ್ರನೊಬ್ಬ JEE ಪರೀಕ್ಷೆಯಲ್ಲಿ ಅದ್ಬುತ ಯಶಸ್ಸು ಸಾಧಿಸಿದ್ದಾನೆ. ಈತ ಮೊದಲ ಪ್ರಯತ್ನದಲ್ಲಿಯೇ 99.93 ಪರ್ಸೆಂಟೈಲ್ ಪಡೆದುಕೊಂಡಿದ್ದು ಐಐಟಿಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡುವ ಹಂಬಲ ಹೊಂದಿದ್ದಾನೆ.
ದೀಪಕ್ ಪ್ರಜಾಪತಿ ಎಂಬ ಈ ವಿದ್ಯಾರ್ಥಿ ತನ್ನ ಪಕ್ಕದ ಮನೆಯವರೊಬ್ಬರಿಂದ ಜೆಇಇ ಕುರಿತು ಮಾಹಿತಿ ತಿಳಿದುಕೊಂಡಿದ್ದಾನೆ. ಬಳಿಕ ಅದಕ್ಕಾಗಿ ಕಠಿಣ ಶ್ರಮ ಹಾಕಿ ಓದಿದ್ದು, ಇದೀಗ ಅದಕ್ಕೆ ಸಾರ್ಥಕತೆ ದೊರೆತಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ಗಾಗಿ ಈತನಿಗೆ ಮೊಬೈಲ್ ಖರೀದಿಸುವ ಶಕ್ತಿಯೂ ಇರಲಿಲ್ಲ. ಕಡೆಗೆ ಆತನ ತಂದೆ ಸಾಲ ಮಾಡಿ ಮೊಬೈಲ್ ಕೊಡಿಸಿದ್ದರು. 12ನೇ ತರಗತಿ ಬಳಿಕ ಜೆಇಇ ಪರೀಕ್ಷೆಯ ಕೋಚಿಂಗ್ ಗಾಗಿ ಸಂಬಂಧಿಕರೊಬ್ಬರು ಶುಲ್ಕ ಕಟ್ಟಿದ್ದರು.