ಬಿಕೆಪಿ ಚಾನ್ಸೌರಿಯಾ ಎಂಬ ವ್ಯಕ್ತಿ ತಮ್ಮ ಮೃತ ಪತ್ನಿಯ ನೆನಪಿಗಾಗಿ ರಾಧೆ-ಕೃಷ್ಣನ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯ ನಿರ್ಮಿಸಿದರೆ ಅಷ್ಟು ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಅವರು ತಮ್ಮ ಸಂಪೂರ್ಣ ಜೀವನದ ಹಣವನ್ನು ಇದಕ್ಕೆ ವಿನಿಯೋಗ ಮಾಡಿದ್ದಾರೆ.
ಚಿತ್ರಕೂಟದಲ್ಲಿ ದೇವಾಲಯವನ್ನು ನಿರ್ಮಿಸುವುದು ತಮ್ಮ ಪತ್ನಿಯ ಆಲೋಚನೆಯಾಗಿತ್ತು. ಅವರು ತಾವು ದುಡಿದ್ದದ್ದೆಲ್ಲವನ್ನೂ ದೇವಾಲಯ ನಿರ್ಮಾಣ ಮಾಡಲು ಬಯಸಿದ್ದರು. ಆದರೆ ಇಂದು ಆಕೆ ಇಲ್ಲ. ಆಕೆಯ ನೆನಪಿಗಾಗಿ ದೇವಾಲಯ ನಿರ್ಮಿಸಲಾಗುವುದು ಎಂದು ಚಾನ್ಸೌರಿಯಾ ಹೇಳಿದ್ದಾರೆ.
ಅವರು ತಮ್ಮ 32 ವರ್ಷಗಳ ಸಂಪೂರ್ಣ ಆದಾಯ 1.5 ಕೋಟಿ ರೂಪಾಯಿ ದೇವಾಲಯ ನಿರ್ಮಾಣಕ್ಕೆ ಬಳಸಿದ್ದಾರೆ. ತಮ್ಮ ಪತ್ನಿಯ ಆಸೆಯನ್ನು ಈಡೇರಿಸುವುದು ನನ್ನ ಕರ್ತವ್ಯ. ಆಕೆಯ ಆತ್ಮಕ್ಕೆ ಇದರಿಂದ ಸದ್ಗತಿ ಸಿಗುತ್ತದೆ. ಆಕೆಯ ಇಚ್ಛೆಯಂತೆ ನನ್ನ ಜೀವಮಾನದ ದುಡಿತದ ಹಣವನ್ನು ದೇವಾಲಯ ನಿರ್ಮಾಣಕ್ಕೆ ವಿನಿಯೋಗ ಮಾಡಿದ್ದೇನೆ ಎಂದು ಬಿಕೆಪಿ ಚಾನ್ಸೌರಿಯಾ ಹೇಳಿದ್ದಾರೆ.