alex Certify ಸಿಹಿ ವಿತರಣೆಗೆ ತೆರಳುವಾಗಲೇ ನಡೆದಿತ್ತು ದುರಂತ; ಎದೆ ನಡುಗಿಸುತ್ತೆ ಭೀಕರ ಅಪಘಾತದ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಹಿ ವಿತರಣೆಗೆ ತೆರಳುವಾಗಲೇ ನಡೆದಿತ್ತು ದುರಂತ; ಎದೆ ನಡುಗಿಸುತ್ತೆ ಭೀಕರ ಅಪಘಾತದ ವಿಡಿಯೋ…!

MP Horror! Mini Truck Ruthlessly Crushes Bike Riders In Jabalpur; One Dies On Spot, Another Critical; Disturbing VISUALS Surface

ಕುಟುಂಬದಲ್ಲಿ ನಡೆದಿದ್ದ ಸಂತಸದ ಕಾರ್ಯಕ್ರಮದ ಸಂದರ್ಭದಲ್ಲಿ ಸಂಬಂಧಿಗಳಿಗೆ ಸಿಹಿ ವಿತರಿಸಲು ತೆರಳುತ್ತಿದ್ದವರಿಗೆ ಟ್ರಕ್ ಒಂದು ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡು ಸಾವು – ಬದುಕಿನ ನಡುವೆ ಹೋರಾಡುತ್ತಿದ್ದಾನೆ ಇಂತಹದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಭಾನುವಾರ ಮಧ್ಯಾಹ್ನ ಮಧ್ಯಪ್ರದೇಶದ ಜಬಲ್ಪುರದಲ್ಲಿ ಈ ಘಟನೆ ನಡೆದಿದ್ದು, ಭೀಕರ ಅಪಘಾತದ ದೃಶ್ಯ ಎದೆ ನಡುಗಿಸುವಂತಿದೆ. ಬೈಕ್ ಸವಾರರು ತೆರಳುತ್ತಿದ್ದಾಗ ಟ್ರಕ್ ಚಾಲಕ ನಿರ್ಲಕ್ಷದಿಂದ ಚಾಲನೆ ಮಾಡಿ ಈ ಅಪಘಾತವೆಸಗಿದ್ದಾನೆ ಅಷ್ಟೇ ಅಲ್ಲ, ಘಟನೆ ನಡೆದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಅಪಘಾತದಲ್ಲಿ ಜಬಲ್ಪುರ ಸಮೀಪದ ಗ್ರಾಮದ ನಿವಾಸಿ ಲಕ್ಷ್ಮಣ್ ಸೇನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆತನ ಸಂಬಂಧಿ ದೀಪ್ ಚಂದ್ ಸೇನ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಟ್ರಕ್ ಚಾಲಕನ ನಿರ್ಲಕ್ಷ್ಯದಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಹೇಳಿರುವ ಪೊಲೀಸರು, ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿ ಆತನ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...