alex Certify ಗೋಡ್ಸೆ ಗಲ್ಲಿಗೇರಿಸಿದ ಜೈಲಿನ ಮಣ್ಣಿನಿಂದಲೇ ಅವರ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಹಿಂದೂ ಮಹಾಸಭಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಡ್ಸೆ ಗಲ್ಲಿಗೇರಿಸಿದ ಜೈಲಿನ ಮಣ್ಣಿನಿಂದಲೇ ಅವರ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಹಿಂದೂ ಮಹಾಸಭಾ

1949ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದಿದ್ದ ನಾಥುರಾಂ ಗೋಡ್ಸೆಯನ್ನು ಹರಿಯಾಣದ ಅಂಬಾಲಾ ಸೆಂಟ್ರಲ್​ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಇದೀಗ ಈ ಜೈಲಿನಿಂದ ತಂದ ಮಣ್ಣಿನಿಂದ ಗೋಡ್ಸೆಯ ಪ್ರತಿಮೆ ನಿರ್ಮಿಸುವುದಾಗಿ ಹಿಂದೂ ಮಹಾಸಭಾ ಹೇಳಿಕೆ ನೀಡಿದೆ. ಗೋಡ್ಸೆ ಪುಣ್ಯತಿಥಿಯನ್ನು ಆಚರಿಸಿ ಬಲಪಂಥೀಯ ಸಂಘಟನೆ ಹಿಂದೂ ಮಹಾಸಭಾ ಈ ಘೋಷಣೆಯನ್ನು ಮಾಡಿದೆ.

ಮಹಾಸಭಾದ ಕಾರ್ಯಕರ್ತರು ಕಳೆದ ವಾರವಷ್ಟೇ ಅಂಬಾಲಾ ಜೈಲಿನಿಂದ ಮಣ್ಣನ್ನು ತಂದಿದ್ದಾರೆ. ಈ ಜೈಲಿನಲ್ಲಿ ಗೋಡ್ಸೆ ಹಾಗೂ ನಾರಾಯಣ ಆಪ್ಟೆಯನ್ನು ಗಲ್ಲಿಗೇರಿಸಲಾಗಿತ್ತು. ಹೀಗಾಗಿ ಈ ಜೈಲಿನ ಮಣ್ಣಿನಿಂದಲೇ ಗೋಡ್ಸೆ ಹಾಗೂ ಆಪ್ಟೆ ಪ್ರತಿಮೆಯನ್ನು ನಿರ್ಮಿಸಲಾಗುತ್ತದೆ ಮತ್ತು ಗ್ವಾಲಿಯರ್​ನಲ್ಲಿರುವ ಹಿಂದೂ ಮಹಾಸಭಾದ ಕಚೇರಿಯಲ್ಲಿ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದು ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜೈವೀರ್​ ಭಾರದ್ವಾಜ್​ ಹೇಳಿದ್ದಾರೆ.

ಮಹಾಸಭಾದ ಕಾರ್ಯಕರ್ತರು ಸೋಮವಾರ ಉತ್ತರ ಪ್ರದೇಶದ ಮೀರತ್​ನಲ್ಲಿರುವ ಬಲಿದಾನ​ ಧಾಮದಲ್ಲಿ ಗೋಡ್ಸೆ ಹಾಗೂ ಆಪ್ಟೆ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಈ ರೀತಿಯ ಬಲಿದಾನ ಧಾಮವನ್ನು ಪ್ರತಿಯೊಂದು ರಾಜ್ಯದಲ್ಲೂ ನಿರ್ಮಿಸುವುದಾಗಿ ಜೈವೀರ್​ ಹೇಳಿದ್ದಾರೆ.

2017ರಲ್ಲಿ ಗ್ವಾಲಿಯರ್​ ಜಿಲ್ಲಾಡಳಿತವು ಗೋಡ್ಸೆಯ ಪ್ರತಿಮೆಯನ್ನು ವಶಪಡಿಸಿಕೊಂಡಿತ್ತು. ಅದನ್ನು ಇಲ್ಲಿಯವರೆಗೂ ಹಿಂತಿರುಗಿಸಿಲ್ಲ ಎಂದು ಇದೇ ವೇಳೆ ಹೇಳಿದ್ರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...