ಭೋಪಾಲ್: ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪತಿ ಮರ್ಮಾಂಗವನ್ನೇ ಮಹಿಳೆ ಕತ್ತರಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಟಿಕಮ್ ಗಢ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ಡಿಸೆಂಬರ್ 7 ರಂದು ಘಟನೆ ನಡೆದಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪತಿರಾಯ ನಾಲ್ಕು ದಿನದ ನಂತರ ಜತಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಜತರ ಪೊಲೀಸ್ ಠಾಣಾಧಿಕಾರಿ ತ್ರಿವೇಂದ್ರ ತ್ರಿವೇದಿ ಘಟನೆ ಬಗ್ಗೆ ಮಾಹಿತಿ ನೀಡಿದ್ದು, 2019 ರಲ್ಲಿ ಮದುವೆಯಾಗಿರುವ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಸಂಬಂಧಿಕರು ಸಂಧಾನ ಮಾಡಿಸಿದ್ದರು. ಇತ್ತೀಚೆಗೆ ಮನೆಗೆ ಬಂದಿದ್ದ ಪತ್ನಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪತಿ ಪೀಡಿಸಿದ್ದಾನೆ. ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಮುಂದಾಗುತ್ತಿದ್ದಂತೆ ಆಕ್ರೋಶಗೊಂಡ ಪತ್ನಿ ಮರ್ಮಾಂಗ ಕತ್ತರಿಸಿದ್ದಾಳೆ ಎನ್ನಲಾಗಿದೆ.