alex Certify ʼಭಾನುವಾರʼ ಕಡ್ಡಾಯ ರಜೆ ಬೇಕೆಂದವನು ನೀಡಿದ್ದು ಮಾತ್ರ ವಿಚಿತ್ರ ಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಭಾನುವಾರʼ ಕಡ್ಡಾಯ ರಜೆ ಬೇಕೆಂದವನು ನೀಡಿದ್ದು ಮಾತ್ರ ವಿಚಿತ್ರ ಕಾರಣ…!

ಭಗವದ್ಗೀತೆ ಓದಿ ತನ್ನ ಹಿಂದಿನ ಜನ್ಮ ಅರಿಯಲು ಭಾನುವಾರದಂದು ಕಡ್ಡಾಯ ರಜೆ ನೀಡಿ ಎಂದು ಪತ್ರ ಬರೆದ ಇಂಜಿನಿಯರ್‌…..ಅದಕ್ಕೆ ಉನ್ನತ ಅಧಿಕಾರಿ ಕೊಟ್ಟ ಪ್ರತ್ಯುತ್ತರವೇ ‘ಸೂಪರ್‌ ‘ ಆಗಿದೆ.

ನಾನು ಹಿಂದಿನ ಜನ್ಮದಲ್ಲಿ ದ್ವಾಪರಯುಗದಲ್ಲಿ ಜನಿಸಿದ್ದಾಗ, ನಕುಲ ನನ್ನ ಸ್ನೇಹಿತನಾಗಿದ್ದ. ಈಗ ನಕುಲನು ಅಸಾದುದ್ದೀನ್‌ ಒವೈಸಿಯಾಗಿ ಹುಟ್ಟಿದ್ದಾನೆ. ಅದೇ ರೀತಿ ಶಕುನಿಯು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಆಗಿ ಜನಿಸಿದ್ದಾನೆ. ಹಿಂದಿನ ಜನ್ಮದ ಬಗ್ಗೆ ಇನ್ನು ಹೆಚ್ಚು ಮಾಹಿತಿಯನ್ನು ಕಲೆಹಾಕಲು ಪ್ರತಿ ಭಾನುವಾರ ಕಡ್ಡಾಯ ರಜೆ ಕೊಡಿ ಎಂದು ಮಧ್ಯಪ್ರದೇಶದ ಉಪ ಅಭಿಯಂತರದ ರಾಜ್‌ಕುಮಾರ್‌ ಯಾದವ್‌ ಅವರು ಹಿರಿಯ ಅಧಿಕಾರಿಗೆ ಪತ್ರ ಬರೆದು ಕೋರಿದ್ದಾರೆ.

ʼನವರಾತ್ರಿʼ ಉಪವಾಸ ಸಂದರ್ಭದಲ್ಲಿ ತಪ್ಪದೇ ಸೇವಿಸಿ ಈ ಶಕ್ತಿಯುತ ಉಪಹಾರ

ಇಂಥ ಪತ್ರಗಳು ಇಲಾಖೆಯ ಆಂತರಿಕ ವಲಯದಲ್ಲಿ ಸಾಮಾನ್ಯವಾದರೂ, ಯಾದವ್‌ ಅವರ ಪತ್ರ ಸ್ವಲ್ಪ ಹೆಚ್ಚಿನ ಹಾಸ್ಯವನ್ನೇ ತನ್ನಲ್ಲಿ ಅಡಗಿಸಿಕೊಂಡಿದೆ. ಆತ್ಮಸಂಶೋಧನೆ ಮಾಡಲು ಹೊರಟಿದ್ದೇನೆ. ಅದರಿಂದ ಅಹಂಕಾರವನ್ನು, ಸ್ವಾರ್ಥವನ್ನು ಅಳಿಸಿ ಹಾಕಬೇಕೆಂದು ಇದ್ದೇನೆ ಎಂದು ಯಾದವ್‌ ಅವರು ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಈ ಪತ್ರವು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಇಂಥ ಸರಕಾರಿ ನೌಕರನ ಹೊಟ್ಟೆಗೆ ಸರಿಯಾಗಿ ರಾಮ ಬಾಣ ಬಿಟ್ಟು ಸಾಯಿಸಬೇಕು ಎಂದು ನೆಟ್ಟಿಗರು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ಕಳ್ಳ ಇಂಜಿನಿಯರ್‌ ತನ್ನ ಕರ್ತವ್ಯ ನಿಭಾಯಿಸಲು ಭಾನುವಾರದ ರಜೆಗೆ ಅಡ್ಡದಾರಿ ಹಿಡಿದು, ಹಿಂದೂ ಪರಂಪರೆಯನ್ನು ಅವಹೇಳನ ಮಾಡುತ್ತಿದ್ದಾನೆ ಎಂದು ಮತ್ತೆ ಕೆಲವು ನೆಟ್ಟಿಗರು ಸಿಟ್ಟಿಗೆದ್ದಿದ್ದಾರೆ.

ಸಾಯುವ ಮೊದಲು ಇಂಥವರಿಗೆ ಎದುರಾಗುತ್ತೆ ಸಂಕಷ್ಟ

ಆದರೆ, ಹಿರಿಯ ಅಧಿಕಾರಿ ಜನಪದ್‌ ಪಂಚಾಯತ್‌ ಸಿಇಒ ಪರಾಗ್‌ ಪಂಥೀ ಅವರು, ಯಾದವ್‌ಗೆ ತಲೆ ತಿರುಗಿ ಹೋಗುವಂತಹ ಪ್ರತ್ಯುತ್ತರವನ್ನು ಪತ್ರದ ಮುಖಾಂತರವೇ ರವಾನಿಸಿದ್ದಾರೆ.

ಪೂಜೆ ಮಾಡುವ ವೇಳೆ ಈ ಸಂಕೇತ ಸಿಕ್ಕಿದ್ರೆ ‘ಅದೃಷ್ಟ’ ಬದಲಾದಂತೆ

’ ನಿಮ್ಮ ಧಾರ್ಮಿಕ ಯಾತ್ರೆಯ ಅನುಭವಕ್ಕೆ ನಾವು ಅಡ್ಡಬರಲ್ಲ. ಬದಲಾಗಿ ಸಹಕರಿಸುತ್ತೇವೆ. ತನ್ನ ಇಚ್ಛೆಯಂತೆಯೇ ಭಾನುವಾರವನ್ನು ಕಳೆಯಬೇಕು ಎಂದುಕೊಳ್ಳುವ ದುರಹಂಕಾರವು ಮನುಷ್ಯನಿಗೆ ಒಳ್ಳೆಯದಲ್ಲ. ಅದು ಸಾಧನೆಯ ಹಾದಿಯಲ್ಲಿನ ತೊಡಕು. ಹಾಗಾಗಿ ತಮ್ಮಲ್ಲಿ ಉದ್ಭವಿಸಿರುವ ಅಹಂಕಾರವನ್ನು ಅಳಿಸಿ, ನಿಮಗೆ ನೆರವಾಗಲೆಂದೇ ಇನ್ಮುಂದೆ ಕಡ್ಡಾಯವಾಗಿ ತಾವು ಭಾನುವಾರ ಕೆಲಸ ಮಾಡಬೇಕು ಎಂದು ಆದೇಶಿಸುತ್ತಿದ್ದೇನೆ’ ಎಂದಿದ್ದಾರೆ…!

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...