ನವದೆಹಲಿ: 2024ರ ಚುನಾವಣೆಯಲ್ಲೂ ಮತ್ತೆ ನಾನೇ ಗೆದ್ದು ಬರುತ್ತೇನೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಜಾರಿಗೆ ತರಲಾದ ಮಹಾತ್ವಾಕಾಂಕ್ಷಿ ಜಿಲ್ಲಾ ಯೋಜನೆಗಳು ಸ್ಪೂರ್ತಿದಾಯಕ ಜಿಲ್ಲೆಗಳಾಗಿ ಹೊರಹೊಮ್ಮಿದ್ದು, ಮುಂದಿನ ವರ್ಷ ಅಕ್ಟೋಬರ್ -ನವೆಂಬರ್ ನಲ್ಲಿ ಮಹತ್ವಾಕಾಂಕ್ಷಿ ವಲಯಗಳ ಪ್ರಗತಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಮೂಲಕ 2024ರಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಸಂದೇಶವನ್ನು ಪ್ರಧಾನಿ ಮೋದಿ ರವಾನಿಸಿದ್ದಾರೆ. ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯ ಭಾಗವಾಗಿ 100 ಮಹತ್ವಾಕಾಂಕ್ಷಿ ವಲಯಗಳ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, 2024ರ ಅಕ್ಟೋಬರ್ ನವೆಂಬರ್ ನಲ್ಲಿ ನಾವು ಯೋಜನೆಯ ಮೌಲ್ಯ ಮಾಪನ ಮಾಡಲು ಇಲ್ಲಿ ಸೇರುತ್ತೇವೆ ಎಂಬ ಭರವಸೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.