
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್.ಡಿ.ಎ. 335 ಸ್ಥಾನ ಗಳಿಸಲಿದೆ. ಇಂಡಿಯಾ ಮೈತ್ರಿಕೂಟ 166 ಸ್ಥಾನಗಳನ್ನು ಗಳಿಸಲಿದ್ದು, ಇತರೆ ಪಕ್ಷಗಳು 42 ಸ್ಥಾನ ಗಳಿಸಲಿವೆ ಎಂದು ಇಂಡಿಯಾ ಟುಡೇ ಚಾನೆಲ್ ನಡೆಸಿದ ಸಮೀಕ್ಷೆ ತಿಳಿಸಿದೆ.
ಕರ್ನಾಟಕದಲ್ಲಿ ಒಟ್ಟು 28 ಸ್ಥಾನಗಳ ಪೈಕಿ ಬಿಜೆಪಿ -ಜೆಡಿಎಸ್ ಮೈತ್ರಿಕೂಟ 24, ಕಾಂಗ್ರೆಸ್ 4 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇಂಡಿಯಾ ಟುಡೇ ವತಿಯಿಂದ ದೇಶಾದ್ಯಂತ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ಎನ್.ಡಿ.ಎ. ಕಳೆದ ಬಾರಿಗಿಂತ 18 ಸ್ಥಾನಗಳ ಕಡಿಮೆ ಗಳಿಸಲಿದೆ. ಆದರೂ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಪೂರ್ಣ ಬಹುಮತದೊಂದಿಗೆ ಮೂರನೇ ಬಾರಿಗೆ ಸರ್ಕಾರ ರಚನೆ ಮಾಡಲಿದೆ.
ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಎಲ್ಲಾ 26 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ. ದೆಹಲಿಯಲ್ಲಿ 7ಕ್ಕೆ 7 ಕ್ಷೇತ್ರ, ರಾಜಸ್ಥಾನದಲ್ಲಿ 25ಕ್ಕೆ 25, ಉತ್ತರಪ್ರದೇಶದಲ್ಲಿ 80 ಕ್ಷೇತ್ರಗಳ ಪೈಕಿ 72 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಹೇಳಲಾಗಿದೆ.