ಕೊಲೆ ಪ್ರಕರಣವನ್ನು ಪರಿಹರಿಸಲು ಒಬ್ಬ ಧರ್ಮಗುರು ವಿನಿಂದ ‘ಮಾರ್ಗದರ್ಶನ’ ಕೋರಿದ ಪೊಲೀಸ್ ಅಧಿಕಾರಿ ಸೇವೆಯಿಂದ ಅಮಾನತಗೊಂಡಿದ್ದಾರೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಎಎಸ್‌ಐ ಅಶೋಕ್ ಶರ್ಮಾ 17 ವರ್ಷದ ಬಾಲಕಿಯ ಹಂತಕನನ್ನು ಹಿಡಿಯಲು ಸ್ವಯಂ ಘೋಷಿತ ಆಧ್ಯಾತ್ಮಿಕ ಗುರು ಬಾಬಾ ಪಾಂಡೋಖರ್ ಸರ್ಕಾರ್ ಸಹಾಯವನ್ನು ಕೋರಿದ್ದರು.
ಈ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವೈರಲ್ ವಿಡಿಯೊದಲ್ಲಿ, ಎಎಸ್‌ಐ ಶಂಕಿತರ ಪಟ್ಟಿಯನ್ನು ಆಧ್ಯಾತ್ಮಿಕ ಗುರುಗಳಿಗೆ ಕೈ ಜೋಡಿಸಿ ಹಸ್ತಾಂತರಿಸುವುದನ್ನು ಕಾಣಬಹುದು.
ನಿಮ್ಮ ಪಟ್ಟಿಯಲ್ಲಿ ಕೆಲವು ಹೆಸರುಗಳಿವೆ, ನಾನು ಈಗ ಕೆಲವು ಹೆಸರು ತೆಗೆದುಕೊಳ್ಳುತ್ತೇನೆ, ನಿಮ್ಮ ಪಟ್ಟಿಯಲ್ಲಿ ಇಲ್ಲದ ಹೆಸರೇ ಪ್ರಮುಖ ಆರೋಪಿ ಎಂದು ಆ ಧರ್ಮಗುರು ಹೇಳಿದರು.
ತರುವಾಯ, ಮೂರು ಹೆಸರುಗಳನ್ನು ತೆಗೆದುಕೊಡು ಆ ವ್ಯಕ್ತಿ ಯಾರೆಂದು ಈಗ ನೀವು ಅರ್ಥಮಾಡಿಕೊಳ್ಳಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಅವನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಿರಿ ಎಂದರು.
ಧರ್ಮಗುರುವಿನ ಸಹಾಯ ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಕಾರ ಮುಜುಗರಕ್ಕೆ ಸಿಲುಕಿತ್ತು.