ಇಂಗ್ಲೀಷ್ ಪರೀಕ್ಷೆಯಲ್ಲಿ ಅನುತೀರ್ಣವಾದ ಕಾರಣ ನೊಂದ 12 ನೇ ತರಗತಿ ವಿದ್ಯಾರ್ಥಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಗುದ್ರುಘಾಟ್ ಗ್ರಾಮದಲ್ಲಿ ನಡೆದಿದೆ.
ರಜಿನಿ ಲಿಲ್ಹಾರೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಧ್ಯಪ್ರದೇಶದ ಪ್ರೌಢ ಶಿಕ್ಷಣ ಮಂಡಳಿಯ 12ನೇ ತರಗತಿಯ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಈ ವೇಳೆ ಇಂಗ್ಲೀಷ್ ವಿಷಯದಲ್ಲಿ ನಪಾಸಾಗಿರುವ ವಿಚಾರ ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
BIG BREAKING: ಚೆನ್ನೈ ತಂಡಕ್ಕೆ ಮತ್ತೆ ಧೋನಿ ಕ್ಯಾಪ್ಟನ್: ನಾಯಕತ್ವ ಬಿಟ್ಟು ಕೊಟ್ಟ ಜಡೇಜಾ
ಅನತೀರ್ಣಳಾಗಿರುವುದನ್ನು ತಿಳಿದ ಆಕೆ ಮನೆಯಿಂದ ಹೊರಗೆ ಬಂದು ತನ್ನ ಸೋದರ ಸಂಬಂಧಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಲೇ ಬಾವಿಗೆ ಹಾರಿದ್ದಾಳೆ. ಫೋನಿನಲ್ಲಿ ಬಂದ ಶಬ್ದದಿಂದ ಗಾಬರಿಕೊಂಡ ಸೋದರ ಸಂಬಂಧಿ ತಕ್ಷಣವೇ ಪೋಷಕರಿಗೆ ವಿಷಯ ಮುಟ್ಟಿಸಿದ್ದಾಳೆ. ಆದರೆ ಅವರು ಅಲ್ಲಿಗೆ ಬರುವಷ್ರಲ್ಲೇ ಆಕೆ ಸಾವನ್ನಪ್ಪಿದ್ದಳು.
ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿರೋಡಿ ಪೊಲೀಸ್ ಠಾಣೆಯ ಪ್ರಭಾರಿ ಚೆನ್ ಸಿಂಗ್ ಉಕೆಯ್ ಹೇಳಿದ್ದಾರೆ.