ಮದುವೆ…… ಜೀವನದಲ್ಲಿ ಬರೋವಂತಹ ಅದ್ಭುತ ಘಳಿಗೆ. ಆ ದಿನ ಎರಡು ಕುಟುಂಬಗಳು ಒಂದಾಗಿ ಸೇರಿ ಮೋಜು ಮಸ್ತಿ ಮಾಡೋದು ಕಾಮನ್. ಇತ್ತಿಚೆಗೆ ಮದುಮಕ್ಕಳು ಡಾನ್ಸ್ ಮಾಡೋದು ಸಖತ್ ಟ್ರೆಂಡ್ ಆಗ್ತಿದೆ. ಅದರಲ್ಲೂ ಮದುಮಗಳು ಸಪ್ರೈಜ್ ಡಾನ್ಸ್ ಮಾಡ್ತಾ ಬರ್ತಿದ್ರೆ, ಮದುಮಗ ಅಷ್ಟೆ ಅಲ್ಲ ಅಲ್ಲಿದ್ದವರೆಲ್ಲ ವಾವ್ಹ್ ಅಂದಿರ್ತಾರೆ.
ಆದರೆ ಇಲ್ಲೊಬ್ಬಳು ಮದುಮಗಳಿದ್ದಾಳೆ ನೋಡಿ. ಆಕೆ ಎಂಟ್ರಿಯಾಗೋ ಸ್ಟೈಲ್ ನೋಡಿ, ಇಡೀ ಊರಿಗೆ ಊರೇ ಶಾಕ್ ಆಗಿತ್ತು. ಯಾಕಂದ್ರೆ ಆಕೆ ಮದುವೆ ಮನೆಗೆ ಬಂದಿದ್ದು ಟ್ರ್ಯಾಕ್ಟರ್ ಓಡಿಸ್ಕೊಂಡು.
ಕಪ್ಪು ಬಣ್ಣದ ಗಾಗಲ್, ಕೆಂಪು ಬಣ್ಣದ ಮದುಮಗಳ ಡ್ರೆಸ್ ಹಾಕಿಕೊಂಡು ಟ್ರ್ಯಾಕ್ಟರ್ ಡ್ರೈವಿಂಗ್ ಸೀಟ್ಲ್ಲಿ ಕೂತಿದ್ದ ಮಧ್ಯಪ್ರದೇಶದ ಬೇತುಳ್ನ ಮದುಮಗಳು ಭಾರತಿ, ಡೈರೆಕ್ಟ್ ಆಗಿ ಮದುವೆ ಮನೆಗೆ ಬಂದಿದ್ದಳು.
ಹಾಗೆ ಟ್ರ್ಯಾಕ್ಟರ್ ಓಡಿಸುತ್ತ ಬಂದವಳಿಗೆ ಸಾಥ್ ಕೊಟ್ಟಿದ್ದು ಆಕೆಯ ಇಬ್ಬರು ಸಹೋದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಮಹೇಂದ್ರಾ ಕಂಪನಿಯ ಮಾಲೀಕರಾದ ಆನಂದ್ ಮಹೇಂದ್ರ ಅವರ ಗಮನವನ್ನ ಕೂಡಾ ಸೆಳೆದಿದೆ.
ಉಪನ್ಯಾಸಕರಿಗೆ ಗುಡ್ ನ್ಯೂಸ್: ಸಂಭಾವನೆ ಶೇ.20 ರಷ್ಟು ಹೆಚ್ಚಳ
ಅವರು ಈ ವಿಡಿಯೋವನ್ನ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಹಂಚಿಕೊಂಡು, ಭಾರತಿ ಅನ್ನೊ ಈ ಮದುಮಗಳು ಸ್ವರಾಜ್ಯವನ್ನೇ ಓಡಿಸಿಕೊಂಡು ಬರೋ ಹಾಗಿದೆ. ಅನ್ನೊ ಕ್ಯಾಪ್ಷನ್ ಕೊಟ್ಟಿದ್ದಾರೆ.
ಹಳ್ಳಿಯಲ್ಲಿ ಟ್ರ್ಯಾಕ್ಟರ್ ಓಡಿಸೋದು ಹುಡುಗಿಯರು ಕಲಿಯೋದು ಸಾಮಾನ್ಯ. ನನಗೂ ಟ್ರ್ಯಾಕ್ಟರ್ ಓಡಿಸೋಕೆ ಬರುತ್ತೆ. ಇದೇ ಕಾರಣಕ್ಕೆ ನಾನು ಟ್ರ್ಯಾಕ್ಟರ್ ಓಡಿಸಿಕೊಂಡು ಮದುವೆ ಮನೆಗೆ ಬರಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಆ ಆಸೆ ಮದುವೆ ದಿನ ಈಡೇರಿದೆ ಅಂತ ಮದುಮಗಳು ಭಾರತಿ ಹೇಳಿಕೊಂಡಿದ್ದಾರೆ.