ದಿನನಿತ್ಯ ಒಂದೇ ಬಗೆಯ ಅನ್ನ, ಸಾಂಬಾರಿನಿಂದ ಬೇಸತ್ತ ನಾಲಿಗೆಗೆ ಈ ಹೊಸ ರುಚಿ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುವಂತೆ ಮಾಡುತ್ತದೆ.
ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಚಟ್ನಿಯೂ ಕೂಡ ಊಟಕ್ಕೆ ಅತ್ಯುತ್ತಮ ಜೊತೆಗಾರ. ಮಳೆಗಾಲದ ವಾತಾವರಣದಲ್ಲಿ ಬಿಡುವಿನ ಸಮಯದಲ್ಲಿ ಈ ಚಟ್ನಿಯನ್ನು ಟ್ರೈ ಮಾಡಬಹುದು. ಇದನ್ನು ಮಾಡುವ ವಿವರ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಬಾದಾಮಿ 1 ಹಿಡಿ
ಹಸಿ ಮೆಣಸಿನ ಕಾಯಿ 2
ಎಣ್ಣೆ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ನಿಂಬೆ ರಸ 1 ಚಮಚ
ಒಗ್ಗರಣೆಗೆ ಸಾಸಿವೆ, ಕರಿಬೇವು
ಮಾಡುವ ವಿಧಾನ
ಬಾದಾಮಿಯನ್ನು ಕೆಲ ಗಂಟೆಗಳ ಕಾಲ ನೆನೆಸಿ ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಸ್ವಲ್ಪ ಎಣ್ಣೆ ಹಾಕಿ ಹಸಿ ಮೆಣಸಿನ ಕಾಯಿಯನ್ನು ಹುರಿದು ಜಾರಿಗೆ ವರ್ಗಾಯಿಸಿ.
ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಕೊನೆಯಲ್ಲಿ ನಿಂಬೆ ರಸ ಸೇರಿಸಿ.
ಬಳಿಕ ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿದರೆ ರುಚಿಯಾದ ಬಾದಾಮಿ ಚಟ್ನಿ ಸಿದ್ಧ. ಇಡ್ಲಿ ದೋಸೆಯೊಂದಿಗೆ ಈ ಬಾದಾಮಿ ಚಟ್ನಿ ಸವಿಯಲು ಉತ್ತಮವಾಗಿರುತ್ತದೆ. ಸ್ವಲ್ಪ ಸಿಹಿಯಾಗಿರುವುದರಿಂದ ಮಕ್ಕಳು ಇಷ್ಟಪಟ್ಟು ಸವಿಯುತ್ತಾರೆ.