ಆಫ್ರಿಕಾದ ಕಾಂಗೋ ದೇಶದಲ್ಲಿ ಚಿನ್ನದ ಗುಡ್ಡ ಪತ್ತೆಯಾಗಿದೆ. ಕಿವು ಪ್ರಾಂತ್ಯದ ಕಿನ್ಸ್ ಹಾಸ ಸಮೀಪದಲ್ಲಿ ಲುಹಿಹಿ ಎಂಬ ಗುಡ್ಡವನ್ನು ಚಿನ್ನದ ಗುಡ್ಡ ಎಂದೇ ಕರೆಯಲಾಗುತ್ತದೆ.
ಈ ಗುಡ್ಡದಲ್ಲಿ ಅಗೆದಷ್ಟು ಚಿನ್ನ ಸಿಗುತ್ತಿದ್ದು ಹೆಚ್ಚಿನ ಸಂಖ್ಯೆಯ ಜನ ಸೇರಿಕೊಂಡು ಗುಡ್ಡದ ಮಣ್ಣನ್ನು ಬುಟ್ಟಿಯಲ್ಲಿ ಸಂಗ್ರಹಿಸುತ್ತಿದ್ದಾರೆ. ಅದನ್ನು ತೊಳೆದು ಚಿನ್ನದ ತುಣುಕುಗಳನ್ನು ಪಡೆಯುತ್ತಿದ್ದಾರೆ. ಹೀಗೆ ಜನ ಗುಡ್ಡದಿಂದ ಬೇಕಾದಷ್ಟು ಮಣ್ಣು ತುಂಬಿಕೊಂಡು ಬಂದು ಚಿನ್ನವನ್ನು ಸಂಗ್ರಹಿಸಿದ್ದಾರೆ. ಈ ವಿಚಾರ ಸ್ಥಳೀಯ ಸರ್ಕಾರದ ಗಮನಕ್ಕೆ ಬಂದ ಕೂಡಲೇ ಲುಹಿಹಿ ಗುಡ್ಡದಲ್ಲಿ ಗಣಿಗಾರಿಕೆ ನಿರ್ಬಂಧಿಸಲಾಗಿದೆ.